Thursday, August 18, 2022

Latest Posts

ದಾವಣಗೆರೆಗೆ ಆಗಮಿಸಿದ ರಾಷ್ಟ್ರಧರ್ಮ ಯಾತ್ರೆ: ಗೋವು, ಜಲ, ಪರಿಸರ ರಕ್ಷಣೆಗೆ ಶ್ರೀಗಳ ಕರೆ

ದಾವಣಗೆರೆ: ರಾಷ್ಟ್ರೀಯ ಸಂಪತ್ತಿನ ಉಳಿವಿಗಾಗಿ ರಾಷ್ಟ್ರಧರ್ಮ ಯಾತ್ರೆ ಕೈಗೊಂಡಿರುವ ಮಧ್ಯಪ್ರದೇಶ ನಿತ್ಯಾನಂದ ಆಶ್ರಮದ ಪೀಠಾಧಿಪತಿ ಶ್ರೀ ನರ್ಮದಾನಂದ ಸ್ವಾಮೀಜಿಯವರನ್ನು ಬುಧವಾರ ಹರಿಹರಕ್ಕೆ ಬೀಳ್ಕೊಡಲಾಯಿತು.
ಮಾನಸ ಗಂಗೋತ್ರಿಯಿಂದ ಯಾತ್ರೆ ಆರಂಭಿಸಿರುವ ಸ್ವಾಮಿ ನರ್ಮದಾನಂದ ಈವರೆಗೆ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ಸಂಚರಿಸಿ ಕರ್ನಾಟಕಕ್ಕೆ ಬಂದಿದ್ದಾರೆ. ದೇಶದ 12 ಜ್ಯೋತಿರ್ಲಿಂಗಗಳ ದರ್ಶನದ ಜೊತೆಗೆ ಜನರಲ್ಲಿ ಗೋವು, ಜಲ ಮತ್ತು ಪರಿಸರ ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಶ್ರೀಗಳು ದೇಶ ಪರ್ಯಟನೆ ಕೈಗೊಂಡಿದ್ದಾರೆ.
ದಾವಣಗೆರೆ ಪ್ರವೇಶಿಸಿದ ಶ್ರೀಗಳನ್ನು ವಿಶ್ವ ಹಿಂದೂ ಪರಿಷತ್ ವತಿಯಿಂದ ಬಾಡಾ ಕ್ರಾಸ್‌ನಲ್ಲಿ ಬರಮಾಡಿಕೊಳ್ಳಲಾಯಿತು. ಇದೇ ವೇಳೆ ಶ್ರೀಗಳು ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಪರಿಸರ ರಕ್ಷಣೆ ಬಗ್ಗೆ ಅರಿವು ಮೂಡಿಸಿದರು. ನಗರದ ಹೊರವಲಯದಲ್ಲಿರುವ ಆವರಗೆರೆ ಸಮೀಪದ ಮಹಾವೀರ ಗೋಶಾಲೆಗೆ ಭೇಟಿ ನೀಡಿ, ರಾಸುಗಳಿಗೆ ಮೇವು ತಿನ್ನಿಸಿದರು.
ದೇಶ ಉಳಿಯಬೇಕಾದರೆ ರಾಷ್ಟ್ರದ ಸಂಪತ್ತಿನ ರಕ್ಷಣೆಯಾಗಬೇಕು. ಗೋವು, ನೀರು, ಪರಿಸರದ ಸಂರಕ್ಷಣೆಯಾಗಬೇಕು. ಈ ದಿಸೆಯಲ್ಲಿ ದೇಶದ ಪ್ರತಿಯೊಬ್ಬರೂ ರಾಷ್ಟ್ರೀಯ ಸಂಪತ್ತಿನ ರಕ್ಷಣೆಗಾಗಿ ಕಂಕಣಬದ್ಧರಾಗಿ ಕೆಲಸ ಮಾಡಬೇಕು ಎಂದು ಶ್ರೀಗಳು ಕರೆ ನೀಡಿದರು.
ಯಾತ್ರೆಯಲ್ಲಿ ವಿಹೆಚ್‌ಪಿ ಮಹಾನಗರ ಅಧ್ಯಕ್ಷ ರವೀಂದ್ರ, ಜಿಲ್ಲಾ ಗೋರಕ್ಷಾ ಪ್ರಮುಖ್ ವೈ.ಮಲ್ಲೇಶ, ಹನುಮಂತಪ್ಪ ಎಸ್‌ಓಜಿ, ಕೃಷ್ಣಮೂರ್ತಿ ಪವಾರ್, ಪ್ರತಾಪ್, ಕೆ.ಎನ್.ಓಂಕಾರಪ್ಪ, ರಾಘವೇಂದ್ರ, ಗೋಪಾಲರಾವ್ ಸಾವಂತ್, ಮಲ್ಲಿಕಾರ್ಜುನ ಅಂಗಡಿ, ರಾಜು, ಬಸಣ್ಣ ಕಡ್ಲೆಬಾಳು, ಜೊಳ್ಳಿ ಗುರು, ಮಂಜಣ್ಣ ಆಟೋ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!