Wednesday, June 29, 2022

Latest Posts

ದಾವಣಗೆರೆಯಲ್ಲಿ ಮತ್ತೆ 6 ಕೊರೋನಾ ಕೇಸ್: ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆ

ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ಶನಿವಾರ ಮತ್ತೆ 6 ಹೊಸ ಕೊರೋನಾ ಕೇಸ್ ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.

ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಐವರು ಸೋಂಕಿತರು ಪಿ-651 ಸಂಖ್ಯೆಯ ರೋಗಿಯೊಂದಿಗೆ ಹಾಗೂ ಓರ್ವ ಸೋಂಕಿತ ಪಿ-553 ಸಂಖ್ಯೆಯ ರೋಗಿಯೊಂದಿಗೆ ಸಂಪರ್ಕ ಹೊಂದಿದ್ದರು. ಹೊಸ ಕೇಸ್ ಗಳಲ್ಲಿ 5 ಮಂದಿ ಪುರುಷ, ಓರ್ವ ಮಹಿಳೆ ಇದ್ದು, 20 ವರ್ಷದ ಯುವತಿ, 24 ವರ್ಷದ ಇಬ್ಬರು ಯುವಕರು, 26 ವರ್ಷದ ಯುವಕ, 45 ಹಾಗೂ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

ಈವರೆಗೆ ಜಿಲ್ಲಾಕೇಂದ್ರದಲ್ಲಿ 67 ಕೇಸ್ ದೃಢಪಟ್ಟಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದಂತೆ ಜಿಲ್ಲೆಯಲ್ಲಿ 61 ಸಕ್ರಿಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss