Wednesday, August 10, 2022

Latest Posts

ದಾವಣಗೆರೆ| ಅರ್ನಬ್ ಗೋಸ್ವಾಮಿ ಬಿಡುಗಡೆಗೆ ಒತ್ತಾಯಿಸಿ ನಾಗರಿಕ ವೇದಿಕೆಯಿಂದ ಪ್ರತಿಭಟನೆ

ದಿಗಂತ ವರದಿ, ದಾವಣಗೆರೆ:

ರಾಷ್ಟ್ರೀಯವಾದಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನ ಖಂಡಿಸಿ ನಾಗರಿಕ ವೇದಿಕೆಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ನೂರಾರು ಜನರು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಜೊತೆಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವೇದಿಕೆ ಅಧ್ಯಕ್ಷ, ಮಹಾನಗರ ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಮಾತನಾಡಿ, ಪತ್ರಕರ್ತ ಅರ್ನಾಬ್ ಗೋಸ್ವಾಮಿ ಓರ್ವ ರಾಷ್ಟ್ರವಾದಿ ಪತ್ರಕರ್ತರಾಗಿದ್ದು, ಸೈನಿಕ ಕುಟುಂಬದಿಂದ ಬಂದವರು. ಅರ್ನಾಬ್ ಕುಟುಂಬದಲ್ಲಿ ೫೦ಕ್ಕೂ ಅಧಿಕ ಮಂದಿ ಸೈನ್ಯದಲ್ಲಿದ್ದಾರೆ. ಇಂತಹವರನ್ನು ಕೇವಲ ರಾಜಕೀಯ ಸೇಡಿಗಾಗಿ ಮಹಾರಾಷ್ಟ್ರ ಸರ್ಕಾರ ಬಂಧಿಸಿದ್ದು ತಪ್ಪು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಪ್ರಖರ ಹಿಂದುತ್ವವಾದಿ, ರಾಷ್ಟ್ರಭಕ್ತರಾಗಿದ್ದರು. ಇಂತಹವರ ಮಗನಾಗಿರುವ ಉದ್ಧವ್ ಕುರ್ಚಿಗಾಗಿ ದುರಾಸೆ ಪಡುವ ಸ್ವಾರ್ಥ ರಾಜಕಾರಣಿ, ದೇಶದ್ರೋಹಿ ಕಾಂಗ್ರೆಸ್ ಏಜೆಂಟ್ ಆಗಿರುವುದು ನಾಚಿಕೆಗೇಡು. ಕೂಡಲೇ ಮಹಾರಾಷ್ಟ್ರ ಸರ್ಕಾರ ಅರ್ನಾಬ್ ಗೋಸ್ವಾಮಿಯನ್ನು ಬಿಡುಗಡೆ ಮಾಡಬೇಕು. ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ವೇದಿಕೆಯ ವಿನಾಯಕ ರಾನಾಡೆ, ಗುರು ಸೋಗಿ, ರಾಜು ನೀಲಗುಂದ, ಶಿವಪ್ರಸಾದ ಕುರುಡಿಮಠ್, ಸಚಿನ್ ವರ್ಣೇಕರ್, ಚಂದನ್ ಜೈನ್, ಗೌತಮ್ ಜೈನ್, ಕೆ.ಟಿ.ಚಿನ್ಮಯ್, ಚಂದುಗೌಡ, ಭಾರ್ಗವ್ ಕೇಸರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss