Wednesday, June 29, 2022

Latest Posts

ದಾವಣಗೆರೆ| ಕಲ್ಯಾಣ್ ಜ್ಯುವೆಲರ್ಸ್ ನಲ್ಲಿ ಟ್ರಯಲ್ ನೋಡಿ ಚಿನ್ನ ಎಗರಿಸಿದ ಚಾಲಾಕಿ ಕಳ್ಳರು!

ದಾವಣಗೆರೆ: ನಗರದ ಚಿನ್ನದಂಗಡಿಯೊಂದರಲ್ಲಿ ಆಭರಣ ಖರೀದಿಗೆಂದು ಬಂದಿದ್ದ ಚಾಲಾಕಿಗಳು, ನಕಲಿ ಚಿನ್ನವಿಟ್ಟು 1.43 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ದೋಚಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಮಂಡಿಪೇಟೆಯಲ್ಲಿರುವ ಕಲ್ಯಾಣ್ ಜ್ಯುವೆಲರ್ಸ್ ಶಾಪ್‌ನಲ್ಲಿ ಚಿನ್ನ ಖರೀದಿಗೆ ಬಂದಿದ್ದ ಮೂವರು, ಕೌಂಟರ್ ಬಳಿ ಹೋಗಿ ಆಭರಣದ ಬೆಲೆ ಕೇಳಿದ್ದಾರೆ. ಚಿನ್ನವನ್ನು ಹಾಕಿಕೊಂಡು ನೋಡುವ ನೆಪದಲ್ಲಿ ಒಬ್ಬರು ಕೊರಳಿಗೆ ಹಾಕಿಕೊಂಡಿದ್ದು, ಅಂಗಡಿಯವರ ಗಮನ ಬೇರೆ ಕಡೆ ಸೆಳೆದು ಮೊದಲೇ ಕೊರಳಿನಲ್ಲಿದ್ದ ನಕಲಿ ಸರವನ್ನು ವಾಪಸ್ ನೀಡಿದ್ದಾರೆ. ಮರುದಿನ ಚಿನ್ನವನ್ನು ಸ್ಕ್ಯಾನ್ ಮಾಡುವಾಗ ನಕಲಿ ಸರ ಇರುವುದು ಅಂಗಡಿಯವರಿಗೆ ಗೊತ್ತಾಗಿದೆ. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss