Tuesday, November 24, 2020

Latest Posts

ಕಿಚನ್ TIP: ತೆಂಗಿನ ಕಾಯಿ ಒಡೆದು ಎರಡೇ ದಿನದಲ್ಲಿ ಕೆಟ್ಟ ಸ್ಮೆಲ್ ಆಗಿದ್ದರೆ ಹೀಗೆ ಮಾಡಿ..

ಕಿಚನ್ TIP: ಒಮ್ಮೊಮ್ಮೆ ತೆಂಗಿನ ಕಾಯಿಯನ್ನು ಒಡೆದ ಎರಡೇ ದಿನದಲ್ಲಿ ಕೆಟ್ಟ ವಾಸನೆಯಾಗುತ್ತದೆ. ಆಗ ವಾಸನೆಯನ್ನು ತೆಗೆಯಬೇಕೆಂದರೆ ಮೊದಲಿ ಕಾಯಿ ಕಡಿಗಳನ್ನು ಒಂದು ಗಂಟೆ ಬಿಸಿ ನೀರಿನಲ್ಲಿ ಮುಳುಗಿಸಿಡಿ. ಆನಂತರ ಉಪ್ಪು ಹಾಕಿ...

ಬಿಎಸ್ ವೈ- ಬಿ. ಎಲ್‌. ಸಂತೋಷ್‌ ಭೇಟಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ವಿಷಯ ರಾಜ್ಯದಲ್ಲಿ ಭಾರೀ ಕುತುಹಲ ಮೂಡಿಸಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ...

ಅಧಿಕ ರಕ್ತದೊತ್ತಡ (ಬಿಪಿ) ನಿಯಂತ್ರಿಸಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ರಕ್ತದೊತ್ತಡ ಹೆಚ್ಚಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದರು ಆರೋಗ್ಯ ಹದಗೆಡುತ್ತದೆ. ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ ಹೆಚ್ಚಾದರೆ ಶುಗರ್, ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುತ್ತದೆ....

ದಾವಣಗೆರೆ| ಕೊರೋನಾ ಆತಂಕದೊಂದಿಗೆ ವಿಜಯದಶಮಿ ಆಚರಣೆ

ದಾವಣಗೆರೆ: ಕೊರೋನಾ ಆತಂಕದ ನಡುವೆಯೂ ಜನರು ಸೋಮವಾರ ವಿಜಯದಶಮಿ ಹಬ್ಬವನ್ನು ಶ್ರದ್ಧಾ-ಭಕ್ತಿಗಳಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಸೋಮವಾರ ಕೂಡ ಮಾರುಕಟ್ಟೆಯಲ್ಲಿ ವ್ಯಾಪಾರ ಚೆನ್ನಾಗಿತ್ತು. ಸ್ಥಳೀಯ ವರ್ತಕರು ಹೂವು, ಹಣ್ಣು ಸೇರಿದಂತೆ ಹಬ್ಬದ ಸಾಮಗ್ರಿಗಳ ವಹಿವಾಟಿನಲ್ಲಿ ನಿರತರಾಗಿದ್ದರು. ಹಿಂದಿನ ದಿನಗಳಿಗೆ ಹೋಲಿಸಿದರೆ ಜನಜಂಗುಳಿ ಕೊಂಚ ಕಡಿಮೆಯಾಗಿದ್ದರೂ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು. ಸಾಮಗ್ರಿಗಳ ಬೆಲೆ ಸಹ ಕೊಂಚ ಇಳಿಮುಖವಾಗಿತ್ತು.
ಬೆಳಗ್ಗೆಯಿಂದಲೂ ಜಿಲ್ಲಾ ಕೇಂದ್ರದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಮನೆಗಳಲ್ಲಿ ವಿವಿಧ ಭಕ್ಷ್ಯಭೋಜ್ಯಗಳು ತಯಾರಾಗುತ್ತಿದ್ದವು. ಮಕ್ಕಳು ಹೊಸ ಬಟ್ಟೆ ತೊಟ್ಟು ಸಂಭ್ರಮಿಸುತ್ತಿದ್ದರು. ಮಹಿಳೆಯರು, ಸಾರ್ವಜನಿಕರು ಸಮೀಪದ ದೇವಸ್ಥಾನಗಳಿಗೆ ಮಾಸ್ಕ್ ಹಾಕಿಕೊಂಡು ತೆರಳುತ್ತಿದ್ದ ದೃಶ್ಯ ವಿಶೇಷವಾಗಿ ಕಂಡುಬಂತು. ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಸೇರಿದಂತೆ ಶಕ್ತಿದೇವತೆಯ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಯನ್ನು ಭಕ್ತರು ಕಣ್ತುಂಬಿಕೊಂಡರು.
ನಗರದ ವಿವಿಧ ಕಡೆಗಳಲ್ಲಿ ಬನ್ನಿ ಮರಗಳ ಪೂಜೆ ಸಾಂಗವಾಗಿ ನೆರವೇರಿತು. ಹೆಂಗಳೆಯರು ಪೂಜೆ ನೆರವೇರಿಸಿ ನೈವೇದ್ಯ ಅರ್ಪಿಸಿದರು. ಮನೆಯ ಹುಡುಗರು, ಯುವಕರು ಬನ್ನಿ ಪತ್ರೆ ಸಂಗ್ರಹಿಸಲು ಹರಸಾಹಸಪಡುತ್ತಿದ್ದರು. ಹಬ್ಬ ಆಚರಿಸಿದ್ದ ಜನರು ಸಂಜೆ ಹೊತ್ತಿಗೆ ಬಂಧು-ಮಿತ್ರರಿಗೆ ಬನ್ನಿ ಪತ್ರೆ ವಿತರಿಸಿ ಬಂಗಾರದ ಬದುಕು ಹಾರೈಸಿದರು. ಹಬ್ಬದ ವಿಶೇಷ ಖಾದ್ಯಗಳನ್ನು ಸವಿದು ದಸರಾ ಸಂಭ್ರಮ ಆಸ್ವಾದಿಸಿದರು.
ಮುನ್ನಾದಿನ ಆಯುಧಪೂಜೆ ದಿನದಂದು ಅಂಗಡಿ-ಮುಂಗಟ್ಟು, ವಾಣಿಜ್ಯ ಕೇಂದ್ರಗಳು ವಿಶೇಷವಾಗಿ ಅಲಂಕೃತಗೊಂಡಿದ್ದವು. ವ್ಯವಹಾರಸ್ಥರು ತಮ್ಮ ಗ್ರಾಹಕರನ್ನು ಪೂಜೆಗೆ ಆಮಂತ್ರಿಸಿ ಪ್ರಸಾದ ವಿತರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಅಂಗಡಿ ಪೂಜೆ ನೆರವೇರಿಸಿ, ಹೊಸ ವ್ಯಾಪಾರ ಶುರು ಮಾಡಿದರು. ಮನೆಗಳಲ್ಲಿ ಚಾಕು, ಕುಡುಗೋಲು ಸೇರಿದಂತೆ ದೈನಂದಿನ ಕೆಲಸಕ್ಕೆ ಬೇಕಾದ ಉಪಕರಣಗಳು ಪೂಜೆಗೊಂಡವು.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹಬ್ಬದ ಸಂಭ್ರಮ ಕಳೆಗುಂದಿದ್ದು ಸುಳ್ಳಲ್ಲ. ಕೋವಿಡ್-19 ವೈರಸ್ ಹಾವಳಿ, ಲಾಕ್‌ಡೌನ್ ಹಾಗೂ ನಂತರದ ಸಂಕಷ್ಟದಿಂದ ತತ್ತರಿಸಿರುವ ಜನರು, ಪ್ರತಿವರ್ಷದ ಸಂಪ್ರದಾಯದಂತೆ ಅನಿವಾರ್ಯವಾಗಿ ಹಬ್ಬ ಆಚರಿಸಿದರು. ಹೀಗಾಗಿ ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ಭಾರೀ ವಹಿವಾಟು ಕಂಡುಬಂದಿಲ್ಲ. ಬಹುತೇಕರು ಮಕ್ಕಳಿಗೆ ಮಾತ್ರ ಹೊಸಬಟ್ಟೆ ಖರೀದಿಸಿದ್ದರಿಂದ ಜವಳಿ ವಹಿವಾಟು ಸಹ ಸಾಧಾರಣವಾಗಿತ್ತು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

ಕಿಚನ್ TIP: ತೆಂಗಿನ ಕಾಯಿ ಒಡೆದು ಎರಡೇ ದಿನದಲ್ಲಿ ಕೆಟ್ಟ ಸ್ಮೆಲ್ ಆಗಿದ್ದರೆ ಹೀಗೆ ಮಾಡಿ..

ಕಿಚನ್ TIP: ಒಮ್ಮೊಮ್ಮೆ ತೆಂಗಿನ ಕಾಯಿಯನ್ನು ಒಡೆದ ಎರಡೇ ದಿನದಲ್ಲಿ ಕೆಟ್ಟ ವಾಸನೆಯಾಗುತ್ತದೆ. ಆಗ ವಾಸನೆಯನ್ನು ತೆಗೆಯಬೇಕೆಂದರೆ ಮೊದಲಿ ಕಾಯಿ ಕಡಿಗಳನ್ನು ಒಂದು ಗಂಟೆ ಬಿಸಿ ನೀರಿನಲ್ಲಿ ಮುಳುಗಿಸಿಡಿ. ಆನಂತರ ಉಪ್ಪು ಹಾಕಿ...

ಬಿಎಸ್ ವೈ- ಬಿ. ಎಲ್‌. ಸಂತೋಷ್‌ ಭೇಟಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ವಿಷಯ ರಾಜ್ಯದಲ್ಲಿ ಭಾರೀ ಕುತುಹಲ ಮೂಡಿಸಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ...

ಅಧಿಕ ರಕ್ತದೊತ್ತಡ (ಬಿಪಿ) ನಿಯಂತ್ರಿಸಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ರಕ್ತದೊತ್ತಡ ಹೆಚ್ಚಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದರು ಆರೋಗ್ಯ ಹದಗೆಡುತ್ತದೆ. ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ ಹೆಚ್ಚಾದರೆ ಶುಗರ್, ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುತ್ತದೆ....

ರಾಜ್ಯದಲ್ಲಿ ಇಂದು 1509 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದಲ್ಲಿ ಕೊರೋನಾ ಪ್ರಮಾಣ ಇಳಿಕೆಯಾಗುತ್ತಿದ್ದು, ಇಂದು 1509 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,74,555ಕ್ಕೆ ಏರಿಕೆ ಆಗಿದೆ. ಇನ್ನು , ಕೊರೋನಾದಿಂದ 1645...

Don't Miss

ಕಿಚನ್ TIP: ತೆಂಗಿನ ಕಾಯಿ ಒಡೆದು ಎರಡೇ ದಿನದಲ್ಲಿ ಕೆಟ್ಟ ಸ್ಮೆಲ್ ಆಗಿದ್ದರೆ ಹೀಗೆ ಮಾಡಿ..

ಕಿಚನ್ TIP: ಒಮ್ಮೊಮ್ಮೆ ತೆಂಗಿನ ಕಾಯಿಯನ್ನು ಒಡೆದ ಎರಡೇ ದಿನದಲ್ಲಿ ಕೆಟ್ಟ ವಾಸನೆಯಾಗುತ್ತದೆ. ಆಗ ವಾಸನೆಯನ್ನು ತೆಗೆಯಬೇಕೆಂದರೆ ಮೊದಲಿ ಕಾಯಿ ಕಡಿಗಳನ್ನು ಒಂದು ಗಂಟೆ ಬಿಸಿ ನೀರಿನಲ್ಲಿ ಮುಳುಗಿಸಿಡಿ. ಆನಂತರ ಉಪ್ಪು ಹಾಕಿ...

ಬಿಎಸ್ ವೈ- ಬಿ. ಎಲ್‌. ಸಂತೋಷ್‌ ಭೇಟಿ: ರಾಜ್ಯದಲ್ಲಿ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ ಬೆಳವಣಿಗೆ

ಹೊಸದಿಗಂತ ಆನ್ ಲೈನ್ ಡೆಸ್ಕ್: ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ವಿಷಯ ರಾಜ್ಯದಲ್ಲಿ ಭಾರೀ ಕುತುಹಲ ಮೂಡಿಸಿದೆ. ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸೋಮವಾರ ಭೇಟಿ...

ಅಧಿಕ ರಕ್ತದೊತ್ತಡ (ಬಿಪಿ) ನಿಯಂತ್ರಿಸಲು ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ..

ರಕ್ತದೊತ್ತಡ ಹೆಚ್ಚಾದರೂ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಕಡಿಮೆ ರಕ್ತದೊತ್ತಡ ಇದ್ದರು ಆರೋಗ್ಯ ಹದಗೆಡುತ್ತದೆ. ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು. ರಕ್ತದೊತ್ತಡ ಹೆಚ್ಚಾದರೆ ಶುಗರ್, ಹೃದಯ ಸಂಬಂಧಿ ರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುತ್ತದೆ....
error: Content is protected !!