Tuesday, July 5, 2022

Latest Posts

ದಾವಣಗೆರೆ| ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ 2 ಹೊಸ ಕೇಸ್, ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ

ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ಮಂಗಳವಾರ 12 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ.
ಹೊಸದಾಗಿ ಪತ್ತೆಯಾಗಿರುವ ಕೇಸ್‌ಗಳಲ್ಲಿ 4 ಜನ ಪಿ-696 ಹಾಗೂ 2 ಮಂದಿ ಪಿ-695 ರೋಗಿಯ ಸಂಪರ್ಕ ಹೊಂದಿದ್ದವರು. ಇನ್ನುಳಿದಂತೆ ಅಹ್ಮದಾಬಾದ್‌ಗೆ ಹೋಗಿ ಬಂದಿದ್ದ 6 ಜನ ತಬ್ಲಿಘಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಈವರೆಗೆ ಒಟ್ಟು 83 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಈ ಪೈಕಿ ನಾಲ್ವರು ಮೃತಪಟ್ಟಿದ್ದರೆ ಇಬ್ಬರು ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 77 ಸಕ್ರಿಯ ಪ್ರಕರಣಗಳಿವೆ. ಸರ್ಕಾರದ ಅಧಿಕೃತ ಕೋವಿಡ್-19 ಮಾಹಿತಿ ಜಾಲತಾಣದಲ್ಲಿ ಮಧ್ಯಾಹ್ನ ಬಿಡುಗಡೆಯಾದ ಬುಲೆಟಿನ್‌ನಲ್ಲಿ ದಾವಣಗೆರೆಯಲ್ಲಿ ಯಾವುದೇ ಹೊಸ ಕೇಸ್ ಪತ್ತೆಯಾಗಿರಲಿಲ್ಲ. ಆದರೆ ಸಂಜೆಯ ಬುಲೆಟಿನ್‌ನಲ್ಲಿ 12 ಹೊಸ ಪ್ರಕರಣಗಳು ವರದಿಯಾಗಿದ್ದು, ಜನರನ್ನು ಆತಂಕಕ್ಕೆ ದೂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss