Thursday, July 7, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ ಸೇರಿ 6 ಮಂದಿಗೆ ಸೋಂಕು, ಮೂವರು ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿ ಶನಿವಾರ 6 ಹೊಸ ಕೊರೋನಾ ಪಾಸಿಟಿವ್ ಕೇಸ್ ವರದಿಯಾಗಿದ್ದು, 3 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊಸ ಪ್ರಕರಣಗಳಲ್ಲಿ 39 ವರ್ಷದ ಮಹಿಳೆ, 21 ವರ್ಷದ ಯುವತಿ, 34 ವರ್ಷದ ಪುರುಷ, 60 ವರ್ಷದ ವೃದ್ಧೆ, 34 ವರ್ಷದ ಮಹಿಳೆ ಹಾಗೂ 45 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಇಬ್ಬರು ಆರೋಗ್ಯ ಸಿಬ್ಬಂದಿ ಎಂದು ತಿಳಿದುಬಂದಿದೆ. ಇನ್ನುಳಿದಂತೆ ಪಿ.7576, 8801, 8802 ಸಂಖ್ಯೆಯ ಮೂವರು ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 289 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ಪೈಕಿ 240 ಜನರು ಗುಣಮುಖರಾಗಿದ್ದಾರೆ. 7 ಸಾವು ಸಂಭವಿಸಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 42 ಸಕ್ರಿಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss