Friday, August 19, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ ಕೊರೋನಾಗೆ 2 ಬಲಿ, 41 ಪಾಸಿಟಿವ್ , 82 ಜನ ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ಕೊರೋನಾಗೆ ಮತ್ತೆ ಇಬ್ಬರು ಬಲಿಯಾದರೂ, ಮಹಾಮಾರಿ ಅಬ್ಬರ ಕಡಿಮೆಯಾಗಿದೆ. ಹೊಸ ಪಾಸಿಟಿವ್ ಪ್ರಕರಣಗಳು 41 ಮಾತ್ರವೇ ವರದಿಯಾಗಿದ್ದು, 82 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇಲ್ಲಿನ ಜೆ.ಹೆಚ್.ಪಟೇಲ್ ಬಡಾವಣೆಯ 79 ವರ್ಷದ ವೃದ್ಧ, ಚನ್ನಗಿರಿ ತಾಲೂಕು ನಲ್ಲೂರು ಗ್ರಾಮದ 50 ವರ್ಷದ ಪುರುಷ ಭಾನುವಾರ ಮೃತಪಟ್ಟಿದ್ದು, ಇಬ್ಬರಿಗೂ ಕೊರೋನಾ ಸೋಂಕು ಇರುವುದು ಸೋಮವಾರದ ವರದಿಯಲ್ಲಿ ದೃಢಪಟ್ಟಿದೆ.
ಹೊಸ ಪ್ರಕರಣಗಳಲ್ಲಿ ದಾವಣಗೆರೆ ತಾಲೂಕಿನಲ್ಲಿ 18, ಹರಿಹರದಲ್ಲಿ 5, ಜಗಳೂರು 6, ಚನ್ನಗಿರಿ 4 ಹಾಗೂ ಹೊನ್ನಾಳಿ ತಾಲೂಕಿನಲ್ಲಿ 14 ಮಂದಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ ಪೊಲೀಸ್ ಸಿಬ್ಬಂದಿ, ಹೌಸ್ ಸರ್ಜನ್, ಕೆಎಸ್ಸಾರ್ಟಿೂಸಿ ಸಿಬ್ಬಂದಿ ಮತ್ತು ಬ್ಯಾಂಕ್ ನೌಕರ ಸೇರಿದ್ದಾರೆ.
ದಾವಣಗೆರೆಯ 48, ಹರಿಹರ 2, ಚನ್ನಗಿರಿ 13, ಜಗಳೂರು 6, ಹೊನ್ನಾಳಿ 5 ಮತ್ತು ಹೊರಜಿಲ್ಲೆಯ 1 ವ್ಯಕ್ತಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 2,425 ಪಾಸಿಟಿವ್ ಕೇಸ್ ವರದಿಯಾಗಿದ್ದು, 1,561 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. 57 ಸಾವು ಸಂಭವಿಸಿದ್ದು, ಸದ್ಯ ಜಿಲ್ಲೆಯಲ್ಲಿ 807 ಸಕ್ರಿಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!