Wednesday, August 17, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ ಕೋರ್ಟ್, ತಾಪಂ ಸಿಬ್ಬಂದಿ ಸಹಿತ 134 ಜನರಿಗೆ ಸೋಂಕು, ಮಹಾಮಾರಿಗೆ 4 ಬಲಿ

ದಾವಣಗೆರೆ: ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 4 ಮಂದಿ ಬಲಿಯಾಗಿದ್ದು, ಮೃತರ ಒಟ್ಟು ಸಂಖ್ಯೆ 41ಕ್ಕೆ ಏರಿಕೆಯಾಗಿದೆ. ದಾವಣಗೆರೆಯ ಕೋರ್ಟ್ ಸಿಬ್ಬಂದಿ, ಕೆಎಸ್ಸಾರ್ಟಿೆಸಿ ಮತ್ತು ತಾಲೂಕು ಪಂಚಾಯತ್ ಸಿಬ್ಬಂದಿ ಸಹಿತ 134 ಜನರಿಗೆ ಸೋಂಕು ಪತ್ತೆಯಾಗಿದ್ದು, 36 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ದಾವಣಗೆರೆ ನಗರದ ಎಂಸಿಸಿ ಎ-ಬ್ಲಾಕ್ನ 76 ವರ್ಷದ ವೃದ್ಧೆ, ಮುದ್ದಾಭೋವಿ ಕಾಲೋನಿಯ 45 ವರ್ಷದ ಪುರುಷ, ಅಹಮದ್ ನಗರದ 59 ಮಹಿಳೆ, ಹರಿಹರ ತಾಲೂಕು ನಾಗೇನಹಳ್ಳಿಯ 70 ವರ್ಷದ ವೃದ್ಧ ಜು.26ರಂದು ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಮಂಗಳವಾರದ ವರದಿಯಲ್ಲಿ ದೃಢಪಟ್ಟಿದೆ.
ಹೊಸ ಪ್ರಕರಣಗಳಲ್ಲಿ ದಾವಣಗೆರೆ ತಾಲೂಕಿನಲ್ಲಿ 59, ಹರಿಹರ 34, ಹೊನ್ನಾಳಿ 20, ಚನ್ನಗಿರಿ 12 ಹಾಗೂ ಜಗಳೂರು ತಾಲೂಕಿನ 8 ಮತ್ತು ಹೊರಜಿಲ್ಲೆಯ 1 ವ್ಯಕ್ತಿಗೆ ಸೋಂಕು ತಗುಲಿದೆ. ದಾವಣಗೆರೆಯ 41, ಹರಿಹರ 11, ಹೊನ್ನಾಳಿ 4, ಜಗಳೂರು ಮತ್ತು ಚನ್ನಗಿರಿಯ ತಲಾ 2 ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 1667 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 962 ಜನರು ಗುಣಮುಖರಾಗಿದ್ದಾರೆ. 41 ಸಾವು ಸಂಭವಿಸಿದ್ದು, ಸದ್ಯ ಜಿಲ್ಲೆಯಲ್ಲಿ 663 ಸಕ್ರಿಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!