Wednesday, June 29, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ ಗುರುವಾರ 8 ಮಂದಿಗೆ ಕೊರೋನಾ ಪಾಸಿಟಿವ್: ಗರ್ಭಿಣಿ ಸಹಿತ ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 8 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಕೆಟಿಜೆ ನಗರದ ಗರ್ಭಿಣಿ ಸಹಿತ 3 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹೊಸ ಪ್ರಕರಣಗಳಲ್ಲಿ ದಾವಣಗೆರೆ ನಗರದ 17 ವರ್ಷದ ಬಾಲಕ, ಎಂಸಿಸಿ ಎ-ಬ್ಲಾಕ್ನ 32 ವರ್ಷದ ಪುರುಷ, ಚೌಕಿಪೇಟೆಯ 35 ವರ್ಷದ ಪುರುಷ, ಬಿಲಾಲ್ ಕಾಂಪೌಂಡ್ ಸಮೀಪದ 24 ವರ್ಷದ ಯುವಕ, ಬೇತೂರು ರಸ್ತೆಯ 80 ವರ್ಷದ ವೃದ್ಧ, ಚನ್ನಗಿರಿ ತಾಲೂಕು ರಾಜಗೊಂಡನಹಳ್ಳಿಯ 40 ವರ್ಷದ ಪುರುಷ, ಹೊನ್ನಾಳಿ ತಾಲೂಕು ಕ್ಯಾಸಿನಕೆರೆಯ 19 ವರ್ಷದ ಯುವಕ, ಹರಿಹರ ಭರತ್ ಕಾಂಪೌಂಡ್ ಸಮೀಪದ 60 ವರ್ಷದ ವೃದ್ಧ ಸೋಂಕಿಗೆ ತುತ್ತಾಗಿದ್ದಾರೆ.
ದಾವಣಗೆರೆ ಜೂಬ್ಲಿಬಾವಿ ರಸ್ತೆಯ 34 ವರ್ಷದ ಪುರುಷ, ಕೆಟಿಜೆ ನಗರದ 21 ವರ್ಷ ವಯಸ್ಸಿನ ಗರ್ಭಿಣಿ ಮಹಿಳೆ ಹಾಗೂ ಹರಿಹರ ಅಗಸರ ಬೀದಿಯ 24 ವರ್ಷದ ಯುವಕ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 333 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 8 ಸಾವು ಸಂಭವಿಸಿವೆ. 272 ಸೋಂಕಿತರು ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 53 ಸಕ್ರಿಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss