Friday, August 19, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ ಹೊಸದಾಗಿ 209 ಕೊರೋನಾ ಪಾಸಿಟಿವ್ ಕೇಸ್ , 85 ಡಿಸ್ಚಾರ್ಜ್

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ 209 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಯಾವುದೇ ಸಾವು ವರದಿಯಾಗಿಲ್ಲ. 85 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಹೊಸ ಪ್ರಕರಣಗಳಲ್ಲಿ ದಾವಣಗೆರೆಯ 114, ಹರಿಹರ 42, ಜಗಳೂರು 3, ಚನ್ನಗಿರಿ 14, ಹೊನ್ನಾಳಿ 31 ಹಾಗೂ ಅನ್ಯಜಿಲ್ಲೆಯ 5 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆ ತಾಲೂಕಿನ 36, ಹರಿಹರ 9, ಜಗಳೂರು 6, ಚನ್ನಗಿರಿ 19, ಹೊನ್ನಾಳಿ 11 ಹಾಗೂ ಹೊರಜಿಲ್ಲೆಯ 4 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 13834 ಪಾಸಿಟಿವ್ ಕೇಸ್ ವರದಿಯಾಗಿವೆ. 227 ಸಾವು ಸಂಭವಿಸಿದ್ದು, 10733 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 2824 ಸಕ್ರಿಯ ಕೇಸ್‌ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!