ದಾವಣಗೆರೆ: ಜಿಲ್ಲೆಯಲ್ಲಿ ಕೊರೋನಾಗೆ ಮತ್ತೊಂದು ಸಾವು ಸಂಭವಿಸಿದ್ದು, ಹೊಸದಾಗಿ 107 ಕೇಸ್ ಪತ್ತೆಯಾಗಿವೆ. 100 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಜಿಲ್ಲೆಯ ಹರಿಹರ ತಾಲೂಕು ಸಾರಥಿ ಗ್ರಾಮದ 50 ವರ್ಷದ ಪುರುಷ ಸೆ.27ರಂದು ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಸೋಮವಾರದ ವರದಿಯಲ್ಲಿ ದೃಢಪಟ್ಟಿದೆ. ಹೊಸ ಪ್ರಕರಣಗಳಲ್ಲಿ ದಾವಣಗೆರೆಯ 44, ಹರಿಹರ 19, ಜಗಳೂರು 14, ಚನ್ನಗಿರಿ 1 ಮತ್ತು ಹೊನ್ನಾಳಿ ತಾಲೂಕಿನ 29 ಜನರಿಗೆ ಸೋಂಕು ತಗುಲಿದೆ.
ದಾವಣಗೆರೆ ತಾಲೂಕಿನ 51, ಹರಿಹರ 15, ಜಗಳೂರು 9, ಚನ್ನಗಿರಿ 6 ಹಾಗೂ ಹೊನ್ನಾಳಿಯ 19 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 15632 ಪಾಸಿಟಿವ್ ಕೇಸ್ ವರದಿಯಾಗಿವೆ. 241 ಸಾವು ಸಂಭವಿಸಿದ್ದು, 12584 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 2807 ಸಕ್ರಿಯ ಕೇಸ್ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.