Saturday, August 13, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ 144 ಮಂದಿಗೆ ಕೊರೋನಾ ಪಾಸಿಟಿವ್, 73 ಮಂದಿ ಡಿಸ್ಚಾರ್ಜ್, 2 ಸಾವು

ದಾವಣಗೆರೆ:  ಜಿಲ್ಲೆಯಲ್ಲಿ ಕೊರೋನಾಗೆ ಇಬ್ಬರು ಬಲಿಯಾಗಿದ್ದು, ಶನಿವಾರ 144 ಹೊಸ ಕೇಸ್ ಪತ್ತೆಯಾಗಿವೆ. 73 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಜಗಳೂರು ತಾಲೂಕು ಸೊಕ್ಕೆ ಗ್ರಾಮದ 40 ವರ್ಷದ ಮಹಿಳೆ, ಹರಿಹರ ತಾಲೂಕು ಗುತ್ತೂರಿನ 65 ವರ್ಷದ ವೃದ್ಧೆ ಸೆ.೨೫ರಂದು ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಶನಿವಾರದ ವರದಿಯಲ್ಲಿ ದೃಢಪಟ್ಟಿದೆ. ಹೊಸ ಪ್ರಕರಣಗಳಲ್ಲಿ ದಾವಣಗೆರೆಯ 49, ಹರಿಹರ 25, ಜಗಳೂರು 18, ಚನ್ನಗಿರಿ 3, ಹೊನ್ನಾಳಿ 48 ಹಾಗೂ ಅನ್ಯಜಿಲ್ಲೆಯ ಓರ್ವರಿಗೆ ಸೋಂಕು ತಗುಲಿದೆ.
ದಾವಣಗೆರೆ ತಾಲೂಕಿನ 18, ಹರಿಹರ 9, ಜಗಳೂರು 27, ಚನ್ನಗಿರಿ 6, ಹೊನ್ನಾಳಿ 11 ಹಾಗೂ ಹೊರಜಿಲ್ಲೆಯ ಇಬ್ಬರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 15451 ಪಾಸಿಟಿವ್ ಕೇಸ್ ವರದಿಯಾಗಿವೆ. 240 ಸಾವು ಸಂಭವಿಸಿದ್ದು, 12368 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 2843 ಸಕ್ರಿಯ ಕೇಸ್‌ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss