ದಾವಣಗೆರೆ: ಜಿಲ್ಲೆಯಲ್ಲಿ ಕೊರೋನಾಗೆ 3 ಮಂದಿ ಬಲಿಯಾಗಿದ್ದು, ಶನಿವಾರ 163 ಹೊಸ ಕೇಸ್ ಪತ್ತೆಯಾಗಿವೆ. 132 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ದಾವಣಗೆರೆ ಕೆಟಿಜೆ ನಗರದ 65 ವರ್ಷದ ವೃದ್ಧೆ, ಚನ್ನಗಿರಿ ತಾಲೂಕು ನೀತಿಗೆರೆ ಗ್ರಾಮದ 60 ವರ್ಷದ ವೃದ್ಧೆ, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ಕಳಗೊಂಡದ 68 ವರ್ಷದ ವೃದ್ಧ ಕಳೆದೊಂದು ವಾರದಲ್ಲಿ ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಶನಿವಾರದ ವರದಿಯಲ್ಲಿ ದೃಢಪಟ್ಟಿದೆ. ಹೊಸ ಪ್ರಕರಣಗಳಲ್ಲಿ ದಾವಣಗೆರೆಯ 74, ಹರಿಹರ 27, ಜಗಳೂರು 22, ಚನ್ನಗಿರಿ 7 ಮತ್ತು ಹೊನ್ನಾಳಿ ತಾಲೂಕಿನ 33 ಮಂದಿಗೆ ಸೋಂಕು ತಗುಲಿದೆ.
ದಾವಣಗೆರೆ ತಾಲೂಕಿನ 51, ಹರಿಹರ 30, ಜಗಳೂರು 7, ಚನ್ನಗಿರಿ 15, ಹೊನ್ನಾಳಿ 23 ಮತ್ತು ಅನ್ಯಜಿಲ್ಲೆಯ 6 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 14406 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 11331 ಸೋಂಕಿತರು ಗುಣಮುಖರಾಗಿದ್ದಾರೆ. 231 ಮಂದಿ ಮೃತಪಟ್ಟಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 2844 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.