Thursday, August 11, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ 232 ಹೊಸ ಕೇಸ್,  162 ಡಿಸ್ಚಾರ್ಜ್

ದಾವಣಗೆರೆ:  ಜಿಲ್ಲೆಯಲ್ಲಿ ಕೊರೋನಾಗೆ ಮತ್ತೆ 5 ಜನ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 172ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಬುಧವಾರ 232 ಹೊಸ ಪಾಸಿಟಿವ್ ಕೇಸ್ ದೃಢಪಟ್ಟಿದ್ದು, 162 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ದಾವಣಗೆರೆಯ ರಾಜೇಂದ್ರ ಬಡಾವಣೆಯ 46 ವರ್ಷದ ಪುರುಷ, ಬಸಾಪುರದ 60 ವರ್ಷದ ವೃದ್ಧ, ತಾಲೂಕಿನ ಹೊನ್ನೂರು ಗ್ರಾಮದ 65 ವರ್ಷದ ವೃದ್ಧೆ ಹಾಗೂ ಜಗಳೂರು ಪಟ್ಟಣದ ಜಿಹೆಚ್ ಕ್ವಾಟ್ರರ್ಸ್ನ 78 ವರ್ಷದ ವೃದ್ಧೆ ಹಾಗೂ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ 55 ಪುರುಷ ಇದೇ ವಾರ ಮೃತಪಟ್ಟಿದ್ದು, ಇವರಿಗೆ ಕೊರೋನಾ ಸೋಂಕಿರುವುದು ಬುಧವಾರದ ವರದಿಯಲ್ಲಿ ದೃಢಪಟ್ಟಿದೆ.
ದಾವಣಗೆರೆ ತಾಲೂಕಿನಲ್ಲಿ 103 ಪಾಸಿಟಿವ್ ಕೇಸ್ ಬಂದಿದ್ದು, 94 ಜನ ಬಿಡುಗಡೆಯಾಗಿದ್ದಾರೆ. ಹರಿಹರ 60 ಪಾಸಿಟಿವ್, 17 ಬಿಡುಗಡೆ, ಜಗಳೂರು 4 ಪಾಸಿಟಿವ್, 3 ಬಿಡುಗಡೆ, ಚನ್ನಗಿರಿ 30 ಪಾಸಿಟಿವ್, 27 ಬಿಡುಗಡೆ, ಹೊನ್ನಾಳಿ 26 ಪಾಸಿಟಿವ್, 18 ಬಿಡುಗಡೆ, ಅನ್ಯ ಜಿಲ್ಲೆಗಳ 9 ಪಾಸಿಟಿವ್ ಕೇಸ್ ದೃಢಪಟ್ಟಿದ್ದು, 3 ಜನ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 7760 ಪಾಸಿಟಿವ್ ಕೇಸ್ ವರದಿಯಾಗಿದ್ದು, 172 ಜನರು ಸೋಂಕಿಗೆ ಬಲಿಯಾಗಿದ್ದಾರೆ. 5792 ಜನರು ಗುಣಮುಖರಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 1796 ಸಕ್ರಿಯ ಕೇಸ್ಗಳ ಸೋಂಕಿತರಿಗೆ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆ, ಸಾಂಸ್ಥಿಕ ಕ್ವಾರಂಟೈನ್ ಮತ್ತು ಹೋಂ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss