ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ 389 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 236 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಓರ್ವ ವ್ಯಕ್ತಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 173ಕ್ಕೆ ಏರಿಕೆಯಾಗಿದೆ.
ದಾವಣಗೆರೆ ವಿಜಯನಗರ ಬಡಾವಣೆಯ 60 ವರ್ಷದ ವೃದ್ಧೆ ಆಗಸ್ಟ್ 25ರಂದು ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಗುರುವಾರದ ವರದಿಯಲ್ಲಿ ದೃಢಪಟ್ಟಿದೆ. ಹೊಸ ಪ್ರಕರಣಗಳಲ್ಲಿ ದಾವಣಗೆರೆಯ 189, ಹರಿಹರ 91, ಜಗಳೂರು 9, ಚನ್ನಗಿರಿ 30, ಹೊನ್ನಾಳಿ 59 ಹಾಗೂ ಅನ್ಯಜಿಲ್ಲೆಯ 11 ಮಂದಿಗೆ ಸೋಂಕು ತಗುಲಿದೆ. ದಾವಣಗೆರೆ ತಾಲೂಕಿನ 112, ಹರಿಹರ 40, ಜಗಳೂರು 23, ಚನ್ನಗಿರಿ 15, ಹೊನ್ನಾಳಿ 40 ಹಾಗೂ ಹೊರಜಿಲ್ಲೆಯ 6 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 8149 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 6028 ಮಂದಿ ಗುಣಮುಖರಾಗಿದ್ದಾರೆ. 173 ಸಾವು ಸಂಭವಿಸಿದ್ದು, ಸದ್ಯ ಜಿಲ್ಲೆಯಲ್ಲಿ 1948 ಸಕ್ರಿಯ ಪ್ರಕರಣಗಳಿವೆ.