Thursday, July 7, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ 244 ಹೊಸ ಕೇಸ್; 381 ಡಿಸ್ಚಾರ್ಜ್

ದಾವಣಗೆರೆ: ಜಿಲ್ಲೆಯಲ್ಲಿ ಕೊರೋನಾಗೆ 5 ಮಂದಿ ಬಲಿಯಾಗಿದ್ದು, ಗುರುವಾರ 244 ಹೊಸ ಕೇಸ್ ಪತ್ತೆಯಾಗಿವೆ. 381 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ದಾವಣಗೆರೆ ವಿನೋಬ ನಗರದ 63 ವರ್ಷದ ವೃದ್ಧ, ಎಂಸಿಸಿ ಬಿ-ಬ್ಲಾಕ್ನ 68 ವರ್ಷದ ವೃದ್ಧ, ಲೇಬರ್ ಕಾಲೋನಿಯ 60 ವರ್ಷದ ವೃದ್ಧ, ಹೊಸ ಬೆಳವನೂರು ಗ್ರಾಮದ 75 ವರ್ಷದ ವೃದ್ಧೆ, ಆನಗೋಡು ಗ್ರಾಮದ 51 ವರ್ಷದ ಮಹಿಳೆ ಕಳೆದ ಮೂರು ದಿನಗಳಲ್ಲಿ ಮೃತಪಟ್ಟಿದ್ದು, ಇವರಿಗೆ ಕೊರೋನಾ ಇರುವುದು ಗುರುವಾರದ ವರದಿಯಲ್ಲಿ ದೃಢಪಟ್ಟಿದೆ.
ಹೊಸ ಪ್ರಕರಣಗಳಲ್ಲಿ ದಾವಣಗೆರೆ ತಾಲೂಕಿನ 133, ಹರಿಹರ 28, ಜಗಳೂರು 8, ಚನ್ನಗಿರಿ 39, ಹೊನ್ನಾಳಿ 32 ಮತ್ತು ಅನ್ಯಜಿಲ್ಲೆಯ 4 ವ್ಯಕ್ತಿಗಳಿಗೆ ಸೋಂಕು ತಗುಲಿದೆ. ದಾವಣಗೆರೆಯ 236, ಹರಿಹರ 46, ಜಗಳೂರು 4, ಚನ್ನಗಿರಿ 35, ಹೊನ್ನಾಳಿ 43 ಹಾಗೂ ಹೊರಜಿಲ್ಲೆಯ 17 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 6270 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 4230 ಮಂದಿ ಗುಣಮುಖರಾಗಿದ್ದಾರೆ. 141 ಸಾವು ಸಂಭವಿಸಿದ್ದು, ಪ್ರಸ್ತುತ 1899 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss