ದಾವಣಗೆರೆ: ಕೊರೋನಾಗೆ ಜಿಲ್ಲೆಯಲ್ಲಿ ಇಬ್ಬರು ಬಲಿಯಾಗುವುದರೊಂದಿಗೆ ಸಾವಿನ ಸಂಖ್ಯೆ 155ಕ್ಕೆ ತಲುಪಿದೆ. ಭಾನುವಾರ 265 ಪಾಸಿಟಿವ್ ಕೇಸ್ ವರದಿಯಾಗಿದ್ದು, 178 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ನಗರದ ಶಂಕರ ವಿಹಾರ ಬಡಾವಣೆಯ 58 ವರ್ಷದ ಪುರುಷ, ತಾಲೂಕಿನ ಆಲೂರು ಗ್ರಾಮದ 80 ವರ್ಷದ ವೃದ್ಧ ಶನಿವಾರ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಇಬ್ಬರಿಗೂ ಕೊರೋನಾ ಇರುವುದು ಭಾನುವಾರದ ವರದಿಯಲ್ಲಿ ದೃಢಪಟ್ಟಿದೆ.
ದಾವಣಗೆರೆ ತಾಲೂಕಿನಲ್ಲಿ 157 ಪಾಸಿಟಿವ್, 97 ಬಿಡುಗಡೆ, ಹರಿಹರ 22 ಪಾಸಿಟಿವ್, 16 ಬಿಡುಗಡೆ, ಜಗಳೂರು 5 ಪಾಸಿಟಿವ್, 26 ಬಿಡುಗಡೆ, ಚನ್ನಗಿರಿ 30 ಪಾಸಿಟಿವ್, 25 ಬಿಡುಗಡೆ, ಹೊನ್ನಾಳಿ 44 ಪಾಸಿಟಿವ್, 10 ಬಿಡುಗಡೆ ಹಾಗೂ ಅನ್ಯ ಜಿಲ್ಲೆಯ 8 ಪಾಸಿಟಿವ್ ಕೇಸ್ ಬಂದಿದ್ದು, ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯಲ್ಲಿ 7044 ಪಾಸಿಟಿವ್ ಕೇಸ್ ವರದಿಯಾಗಿದ್ದು, 155 ಜನ ಸಾವನ್ನಪ್ಪಿದ್ದಾರೆ. 4915 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 1974 ಸಕ್ರಿಯ ಕೇಸ್ಗಳಲ್ಲಿ ಸೋಂಕಿತರಿಗೆ ಜಿಲ್ಲಾಸ್ಪತ್ರೆ, ಖಾಸಗಿ ಆಸ್ಪತ್ರೆ, ಸಾಂಸ್ಥಿಕ ಮತ್ತು ಹೋಂ ಕ್ವಾರಂಟೈನ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.