Thursday, August 11, 2022

Latest Posts

ದಾವಣಗೆರೆ ಜಿಲ್ಲೆಯಲ್ಲಿ 288 ಹೊಸ ಕೊರೋನಾ ಕೇಸ್, 152 ಸೋಂಕಿತರು ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 288 ಕೊರೋನಾ ಕೇಸ್ ಪತ್ತೆಯಾಗಿದ್ದು, 152 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಹೊಸ ಪ್ರಕರಣಗಳಲ್ಲಿ ದಾವಣಗೆರೆಯ 123, ಹರಿಹರ 52, ಜಗಳೂರು 21, ಚನ್ನಗಿರಿ 34 ಮತ್ತು ಹೊನ್ನಾಳಿ ತಾಲೂಕಿನ 58 ಜನರಿಗೆ ಸೋಂಕು ತಗುಲಿದೆ. ದಾವಣಗೆರೆ ತಾಲೂಕಿನ 90, ಹರಿಹರ 19, ಜಗಳೂರು 16, ಚನ್ನಗಿರಿ 8 ಹಾಗೂ ಹೊನ್ನಾಳಿಯ 19 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 15920 ಪಾಸಿಟಿವ್ ಕೇಸ್ ವರದಿಯಾಗಿವೆ. 241 ಸಾವು ಸಂಭವಿಸಿದ್ದು, 12736 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 2943 ಸಕ್ರಿಯ ಕೇಸ್‌ಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss