Saturday, July 2, 2022

Latest Posts

ದಾವಣಗೆರೆ| ಜ್ಯೂನಿಯರ್ ರಾಜಕುಮಾರ್ ಖ್ಯಾತಿಯ ರಂಗ ಕಲಾವಿದ ಕೊಡಗನೂರು ಜಯಕುಮಾರ್ ಅಸ್ತಂಗತ

ದಾವಣಗೆರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ, ಜ್ಯೂನಿಯರ್ ರಾಜಕುಮಾರ್ ಎಂದೇ ಪ್ರಸಿದ್ಧರಾಗಿದ್ದ ಕೊಡಗನೂರು ಜಯಕುಮಾರ ನಗರದ ಬಾಪೂಜಿ ಆಸ್ಪತ್ರೆಯಲ್ಲಿ ಮಂಗಳವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಅವರಿಗೆ 70 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಇವರ ಅಗಲಿಕೆಯಿಂದ ಪತ್ನಿ ಪದ್ಮಾವತಿ, ಪುತ್ರ ಮಾರುತಿ ಸೇರಿದಂತೆ ಇಡೀ ಕುಟುಂಬ, ಬಂಧು-ಬಳಗ, ಸಹ ಕಲಾವಿದರು, ಹಿತೈಷಿಗಳು ಶೋಕದಲ್ಲಿ ಮುಳುಗಿದ್ದಾರೆ. ದಾವಣಗೆರೆ ತಾಲೂಕು ಕೊಡಗನೂರು ಗ್ರಾಮದವರಾದ ಇವರು ಪಾಪ ಪಾಂಡು ಸೇರಿದಂತೆ ಹಲವು ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದರು. ವೃತ್ತಿ ರಂಗಭೂಮಿಯಲ್ಲಿ ಸಾವಿರಾರು ನಾಟಕಗಳಲ್ಲಿ ಅಭಿನಯಿಸಿ ಜನರ ಮನರಂಜಿಸಿದ್ದರು. ಜಯಕುಮಾರ್ ಅಂತ್ಯ ಸಂಸ್ಕಾರವನ್ನು ಕೊಡಗನೂರು ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಜಯಕುಮಾರ್ ನಿಧನಕ್ಕೆ ರಂಗಭೂಮಿ ಕಲಾವಿದರು, ಕಿರುತೆರೆ, ಬೆಳ್ಳಿತೆರೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಂಗಭೂಮಿ, ಕಿರುತೆರೆ, ಬೆಳ್ಳಿ ತೆರೆ ಹೀಗೆ ಮೂರು ಕ್ಷೇತ್ರದಲ್ಲೂ ತಮ್ಮ ಸಹಜ ಅಭಿನಯದಿಂದ ಕೊಡಗನೂರು ಜಯಕುಮಾರ ಮನೆ ಮಾತಾದವರು. ಸುವರ್ಣ ಅಕಾಡೆಮಿ ಪ್ರಶಸ್ತಿ, ವರದಪ್ಪ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಹೀಗೆ ನೂರಾರು ಪ್ರಶಸ್ತಿಗೆ ಪಾತ್ರರಾಗಿದ್ದ ಜಯಕುಮಾರರ ಕಲಾ ಸೇವೆ, ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ವರ್ಷವಷ್ಟೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss