ಹೊಸ ದಿಗಂತ ವರದಿ, ದಾವಣಗೆರೆ:
ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನಗರದಲ್ಲಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಸಂಘಟನೆ ಮುಖಂಡರು, ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಕೂಡಲೇ ಅರ್ನಾಬ್ ಗೋಸ್ವಾಮಿಯನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಇದೇ ವೇಳೆ ವಿಭಾಗ ಸಂಪರ್ಕ ಪ್ರಮುಖ್ ಸತೀಶ ಪೂಜಾರಿ ಮಾತನಾಡಿ, ಹಿಂದೊಮ್ಮೆ ಶಿವಸೇನೆ ವರಿಷ್ಠ ನಾಯಕ ಬಾಳಾಸಾಹೇಬ್ ಠಾಕ್ರೆಯವರು ಮುಂಬೈನಲ್ಲಿ ನಿಂತು ಗುಡುಗಿದರೆ ದೂರದ ಶತೃರಾಷ್ಟ್ರ ಪಾಕಿಸ್ತಾನ ನಡುಗುತ್ತಿತ್ತು. ಅಂತಹವರಿಗೆ ಉದ್ಧವ್ ಠಾಕ್ರೆಯಂತಹ ಸೋನಿಯಾ ಚೇಲಾ ಮಗನಾಗಿರುವುದು ದುರ್ದೈವದ ಸಂಗತಿ. ಪತ್ರಕರ್ತ ಅರ್ನಾಬ್ ಬಂಧನವು ಪ್ರಜಾಪ್ರಭುತ್ವದ 4ನೇ ಅಂಗವಾದ ಮಾಧ್ಯಮ ರಂಗವನ್ನು ಹತ್ತಿಕ್ಕುವ ಕೆಲಸವಾಗಿದೆ ಎಂದು ಆರೋಪಿಸಿದರು.
ಇಡೀ ಘಟನೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧವೂ ಜನಾಕ್ರೋಶ ಮಡುಗಟ್ಟುತ್ತಿದೆ. ತಕ್ಷಣವೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಪ್ರಜಾಪ್ರಭುತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿಯಾದ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು. ಉದ್ಧವ್ ಠಾಕ್ರೆ ಮಗನನ್ನು ರಕ್ಷಿಸುವ ಸಲುವಾಗಿ ದೇಶದ ಕಾನೂನುಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳನ್ನು ಸಹ ವಜಾ ಮಾಡಬೇಕು. ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವ ಪ್ರಾಮಾಣಿಕ ಅಧಿಕಾರಿಗಳನ್ನು ನಿಯೋಜಿಸಬೇಕು. ಈ ಮೂಲಕ ಸಮಾಜದಲ್ಲಿ ನ್ಯಾಯ ವ್ಯವಸ್ಥೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಸಂಘಟನೆಯ ಪ್ರಾಂತ್ಯ ಅಧ್ಯಕ್ಷ, ಹಿರಿಯ ವಕೀಲ ಎಸ್.ಜಯಕುಮಾರ ಮಾತನಾಡಿ, 2018ರಲ್ಲಿ ಅಂತ್ಯಗೊAಡಿದ್ದ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮಹಾರಾಷ್ಟç ಸರ್ಕಾರ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದೆ. ಮುಗಿದುಹೋದ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಳ್ಳಲು ನ್ಯಾಯಾಲಯದ ಅನುಮತಿ ಬೇಕು. ಆದರೆ ಮಹಾರಾಷ್ಟ್ರ ಸರ್ಕಾರ ಏಕಪಕ್ಷೀಯವಾಗಿ ನಿಯಮ ಉಲ್ಲಂಘಿಸಿ ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿರುವುದು ಅಲ್ಲಿನ ಕಾನೂನು ಅವ್ಯವಸ್ಥೆಗೆ ಸಾಕ್ಷಿಯಾಗಿದೆ. ದೇಶಕ್ಕೆ 50ಕ್ಕೂ ಅಧಿಕ ಸೈನಿಕರನ್ನು ನೀಡಿರುವ ರಾಷ್ಟçಭಕ್ತ ಕುಟುಂಬದಿoದ ಬಂದ ಪತ್ರಕರ್ತ ಅರ್ನಾಬ್ ಗೋಸ್ವಾಮಿಯನ್ನು ಕೂಡಲೇ ಬಂಧಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ನಗರ ಪ್ರಧಾನ ಕಾರ್ಯದರ್ಶಿ ಎಸ್.ಗಣೇಶ, ಮುಖಂಡರಾದ ಚೇತನ್, ವೀರೇಶ, ಕಲ್ಲೇಶ, ನಾಗರಾಜ, ಯೋಗೇಶ, ಕುಮಾರ, ಕಿರಣ, ಪುನೀತ್, ವಿಶ್ವನಾಥ, ದ್ಯಾಮೇಶ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.