ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ಶನಿವಾರ 1 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ಇದರೊಂದಿಗೆ ಖಚಿತ ಪ್ರಕರಣಗಳ ಸಂಖ್ಯೆ 89ಕ್ಕೆ ಏರಿಕೆಯಾಗಿದೆ.
ಬಾಷಾನಗರದ 65 ವರ್ಷದ ವೃದ್ಧೆ (ಪಿ.1061) ಸೋಂಕಿಗೆ ತುತ್ತಾಗಿದ್ದು, ಇವರಿಗೆ ಸ್ಟಾಫ್ ನರ್ಸ್(ಪಿ.533) ಸಂಪರ್ಕದಿಂದ ಕೊರೋನಾ ಹರಡಿದೆ. ಸದ್ಯ ಈವರೆಗೆ 89 ಪ್ರಕರಣ ದೃಢಪಟ್ಟಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ನಾಲ್ವರು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 83 ಸಕ್ರಿಯ ಪ್ರಕರಣಗಳಿವೆ.