Monday, August 8, 2022

Latest Posts

ದಾವಣಗೆರೆ| ಮೂರನೇ ಬಾರಿಯೂ ರೇಣುಕಾಚಾರ್ಯ ವರದಿ ನೆಗೆಟಿವ್

ದಾವಣಗೆರೆ: ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮೂರನೇ ಬಾರಿಗೆ ಕೋವಿಡ್-೧೯ ಟೆಸ್ಟ್ ಮಾಡಿಸಿದಾಗಲೂ ವರದಿ ನೆಗೆಟಿವ್ ಬಂದಿದ್ದು, ಅವಳಿ ತಾಲೂಕಿನಲ್ಲಿ ಕೊರೋನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ.
ತಮ್ಮ ಆಪ್ತ ಸಹಾಯಕ ಹಾಗೂ ಬೆಂಗಳೂರು ಕಚೇರಿಯ ಮೂವರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ಹೊನ್ನಾಳಿಯ ತಮ್ಮ ಸ್ವಗೃಹದಲ್ಲಿ 3ನೇ ಬಾರಿಗೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಕೊರೋನಾ ಪ್ರಕರಣಗಳು ಹೊನ್ನಾಳಿ-ನ್ಯಾಮತಿ ತಾಲೂಕಿನಲ್ಲಿ ಹೆಚ್ಚಾಗಿ ವರದಿಯಾಗುತ್ತಿರುವ ಕಾರಣ ಪ್ರತಿಯೊಬ್ಬರೂ ಮನೆಯಲ್ಲಿ ಕ್ಷೇಮವಾಗಿ, ಸುರಕ್ಷಿತವಾಗಿರಬೇಕು. ಏನೇ ತೊಂದರೆ, ಸಮಸ್ಯೆ, ಅಹವಾಲುಗಳಿದ್ದರೂ ತಮ್ಮ ಮನೆಗೆ ಖುದ್ದು ಬರದೆ, ತಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ರೇಣುಕಾಚಾರ್ಯ ತಿಳಿಸಿದ್ದಾರೆ.
ಹೊನ್ನಾಳಿ ಪಟ್ಟಣದ ದುರ್ಗಿಗುಡಿ ವಾರ್ಡ್‌ನಲ್ಲಿ ಮಕ್ಕಳು, ವಯೋವೃದ್ಧರಿಗೆ ಮಾಸ್ಕ್ ವಿತರಿಸಿದ ರೇಣುಕಾಚಾರ್ಯ, ಕೊರೋನಾ ವೈರಸ್ ಬಗ್ಗೆ ಭಯ ಬೇಡ. ಆದರೆ, ಮೈ ಮರೆಯಬಾರದು. ದಿನದಿನಕ್ಕೂ ಅವಳಿ ತಾಲೂಕಿನಲ್ಲಿ ಕೊರೋನಾ ಕೇಸ್ಗಳ ಸಂಖ್ಯೆ ಹೆಚ್ಚುತ್ತಿದ್ದು, ಜನರೂ ಸಹ ಜಾಗೃತರಾಗಬೇಕು. ಯಾವುದೇ ಕಾರಣಕ್ಕೂ ಅನಾವಶ್ಯಕ ಸುತ್ತಾಡುವುದು, ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದನ್ನು ಮಾಡಬಾರದು ಎಂದು ವಿನಂತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss