Thursday, August 11, 2022

Latest Posts

ದಾವಣಗೆರೆ| ಸಂಚಾರ ಪೊಲೀಸ್ ಗೂ ವಕ್ಕರಿಸಿದ ಕೊರೋನ: ಮತ್ತೆ 3 ಪಾಸಿಟಿವ್

ದಾವಣಗೆರೆ: ಜಿಲ್ಲಾ ಕೇಂದ್ರದಲ್ಲಿ ಗುರುವಾರ ಓರ್ವ ಟ್ರಾಫಿಕ್ ಪೊಲೀಸ್ ಸೇರಿದಂತೆ ಮೂವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಖಚಿತ ಪ್ರಕರಣಗಳ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

ಹೊಸ ಕೇಸ್ ಗಳಲ್ಲಿ ಮೂವರೂ ಪುರುಷರಾಗಿದ್ದು, 40 ವರ್ಷದ ವ್ಯಕ್ತಿಗೆ(ಪಿ.960) ಪಿ.852 ಸಂಖ್ಯೆಯ ಮಹಿಳೆಯಿಂದ ಸೋಂಕು ತಗುಲಿದೆ. ಕಂಟೈನ್ ಮೆಂಟ್ ಝೋನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 34 ವರ್ಷದ ಸಂಚಾರ ಪೊಲೀಸ್ ಗೂ(ಪಿ.975) ಕೊರೋನಾ ದೃಢಪಟ್ಟಿದೆ. ಇನ್ ಫ್ಲುಯೆಂಜಾ ಲೈಕ್ ಇಲ್ ನೆಸ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ 32 ವರ್ಷದ ವ್ಯಕ್ತಿಯಲ್ಲೂ(ಪಿ.976) ಸೋಂಕು ಪತ್ತೆಯಾಗಿದೆ.

ಸದ್ಯ ಜಿಲ್ಲಾಕೇಂದ್ರದಲ್ಲಿ 88 ಕೇಸ್ ದೃಢಪಟ್ಟಂತಾಗಿದೆ. ಈ ಪೈಕಿ ನಾಲ್ವರು ಮೃತಪಟ್ಟಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 82 ಸಕ್ರಿಯ ಪ್ರಕರಣಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss