Monday, August 15, 2022

Latest Posts

ದಾವಣಗೆರೆ| ಸಚಿವರ ಕಾರಿಗೆ ಕಿಸಾನ್ ಕಾಂಗ್ರೆಸ್ ಮುತ್ತಿಗೆ, ಹೊಸ ವಿದ್ಯುತ್ ಮಸೂದೆ ಜಾರಿಗೆ ಆಕ್ಷೇಪ

ದಾವಣಗೆರೆ: ಹೊಸ ವಿದ್ಯುತ್ ಮಸೂದೆ ವಿರೋಧಿಸಿ ಮಂಗಳವಾರ ಕಾಂಗ್ರೆಸ್ ಕಿಸಾನ್ ಘಟಕದಿಂದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು. ಇಲ್ಲಿನ ಸರ್ಕ್ಯೂಟ್ ಹೌಸ್ ಬಳಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಬಸವರಾಜು ಶಿವಗಂಗಾ ನೇತೃತ್ವದಲ್ಲಿ ಸಚಿವರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕೋವಿಡ್-19 ಬಿಕ್ಕಟ್ಟಿನ ಮಧ್ಯೆ ಕೇಂದ್ರ ಸರ್ಕಾರವು ಹೊಸ ವಿದ್ಯುತ್ ಮಸೂದೆ ಜಾರಿಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿದ್ಯುತ್ ಉದ್ಯಮಿ ಗೌತಮ್ ಅದಾನಿ ಸೇರಿದಂತೆ ಇತರರಿಗೆ ಲಾಬಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ದೇಶವೇ ಸಂಕಷ್ಟದಲ್ಲಿರುವಾಗ ಆಡಳಿತಾರೂಢರು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಹೊಸ ವಿದ್ಯುತ್ ಕಾಯ್ದೆ ಜಾರಿಗೆ ತರಬಾರದು. ಇದರ ವಿರುದ್ಧ ತೀವ್ರಸ್ವರೂಪದ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಪ್ರವೀಣಕುಮಾರ, ಮುಖಂಡರಾದ ಬಾತಿ ಶಿವಕುಮಾರ, ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್.ಹರೀಶ ಬಸಾಪುರ, ಗಿರಿಧರ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss