ದಾವಣಗೆರೆ| 2 ಹೊಸ ಕೇಸ್, ಬಾಲಕಿ, ವೃದ್ಧ ಸೇರಿ 11 ಜನ ಡಿಸ್ಚಾರ್ಜ್

0
42

ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ ೨ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ೧೧ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಶೀತ ಕೆಮ್ಮು ಜ್ವರ(ಐಎಲ್ಐ) ಹೊಂದಿದ್ದ ಹೊನ್ನಾಳಿ ತಾಲೂಕು ದೊಡ್ಡೇರಿ ಗ್ರಾಮದ 38 ವರ್ಷದ ಪುರುಷ ಮತ್ತು ಬೆಂಗಳೂರು ಪ್ರವಾಸ ಹಿನ್ನೆಲೆಯ ಚಿನ್ನಕಟ್ಟೆ ಗ್ರಾಮದ 63 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ.
7 ವರ್ಷದ ಬಾಲಕಿ, 70 ವರ್ಷದ ವೃದ್ಧೆ ಸೇರಿದಂತೆ ಹರಿಹರ ಅಗಸರಬೀದಿಯ 5, ರಾಜನಹಳ್ಳಿಯ 3, ಹರಿಹರದ 1 ಹಾಗೂ ಚನ್ನಗಿರಿ ಕುಂಬಾರ ಬೀದಿಯ 2 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 297 ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಈ ಪೈಕಿ 257 ಜನರು ಗುಣಮುಖರಾಗಿದ್ದಾರೆ. 7 ಸಾವು ಸಂಭವಿಸಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 33 ಸಕ್ರಿಯ ಪ್ರಕರಣಗಳಿವೆ.

LEAVE A REPLY

Please enter your comment!
Please enter your name here