Friday, August 19, 2022

Latest Posts

ದಾಸವಾಳ ಸೊಪ್ಪಿನ ಆರೋಗ್ಯಕರ ದೋಸೆ.. ಸಿಂಪಲ್ ರೆಸಿಪಿ

ದಾಸವಾಳ ಸೊಪ್ಪು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಬಿಳಿ ದಾಸವಾಳ ಹೂವು, ಸೊಪ್ಪು ದೇಹಕ್ಕೆ ಬಹಳ ಉಪಯೋಗಿಯಾಗಿದೆ. ದಾಸವಾಳ ಸೊಪ್ಪಿನಿಂದ ದೋಸೆ ತಯಾರಿಸಬಹುದು ಹೇಗೆ ಎಂಬುದು ಇಲ್ಲಿದೆ ಓದಿ.

ಬೇಕಾಗುವ ಸಾಮಗ್ರಿಗಳು:

ದೋಸೆ ಹಿಟ್ಟು
ಉದ್ದಿನ ಬೇಳೆ
ದಾಸವಾಳ ಸೊಪ್ಪು
ಉಪ್ಪು
ಈರುಳ್ಳಿ
ಹಸಿಮೆಣಸು

ಮಾಡುವ ವಿಧಾನ:

ಮೊದಲಿಗೆ ಅಕ್ಕಿ, ಉದ್ದಿನ ಬೇಳೆಯನ್ನು ೬ ತಾಸು ನೆನೆಸಿಡಬೇಕು. ನಂತರ ಅಕ್ಕಿ, ಉದ್ದಿನ ಬೇಳೆ ಜೊತೆಗೆ ಒಂದುಷ್ಟು ದಾಸವಾಳದ ಸೊಪ್ಪನ್ನು ಹಾಕಿ ಬೀಸಬೇಕು. ಅದರಲ್ಲೂ ಬಿಳಿ ದಾಸವಾಳದ ಸೊಪ್ಪು ಹಾಕಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಇದೆಲ್ಲವನ್ನೂ ಹಾಕಿದೋಸೆ ಹಿಟ್ಟಿನ ಹದಕ್ಕೆ ಬೀಸಿಕೊಳ್ಳಿ. ನಂತರ ಇದಕ್ಕೆ ಉಪ್ಪು ಈರುಳ್ಳಿ ಮತ್ತು ಹಸಿಮೆಣಸು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ದೋಸೆ ಮಾಡಿಕೊಂಡು ತಿನ್ನಬಹುದು. ಚಟ್ನಿ, ಸಾಂಬಾರಿನ ಜೊತೆ ಸೇವಿಸಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!