ದೇಹದಲ್ಲಿ ನೀರಿನಾಂಶ ಹೆಚ್ಚಾಗಿ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ತರಕಾರಿಗಳಲ್ಲಿ ಸೌತೆಕಾಯಿ ಪ್ರಮುಖವಾಗಿದೆ. ಆದರೆ ಕೇವಲ ಜೀರ್ಣಕ್ರಿಯೆಗೆ ಸಹಕಾಯಿ ಎಂದು ಕೊಂಡಿರುವ ಸೌತೆಕಾಯಿಂದ ಏನೆಲ್ಲಾ ಆರೋಗ್ಯಕರ ಗುಣಗಳಿವೆ ಗೊತ್ತಾ?
ತೂಕ ಇಳಿಕೆ: ಸೌತೆಕಾಯಿಯಲ್ಲಿರುವ ನೀರಿನಾಂಶ ಹಾಗೂ ಕಡಿಮೆ ಕ್ಯಾಲೊರಿಗಳು ಜೀರ್ಣಕ್ರಿಯೆ ಸರಾಗವಾಗಲಿದ್ದು, ದೇಹದ ತೂಕ ಇಳಿಸಲು ಸಹಕಾರಿಯಾಗಲಿದೆ.
ಬಿಪಿ ನಿಯಂತ್ರಣ: ಸೌತೆಕಾಯಿ ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿನ ಪೊಟಾಶಿಯಂ ಅಂಶವು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ಹೃದಯಕ್ಕೆ ಶಕ್ತಿ: ಪೊಟಾಶಿಯಂ ಅಂಶವು ನರಗಳಿಗೆ ಬಲ ನೀಡಲಿದೆ. ಸೌತೆಕಾಯಿಯಲ್ಲಿರುವ ನಾರಿನಾಂಶವು ಕೊಲೆಸ್ಟ್ರಾಲ್ ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.
ಚರ್ಮ: ಸೌತೆಕಾಯಿ ಸೇವನೆಯಿಂದ ದೇಹದಲ್ಲಿ ನೀರಿನಾಂಶ ಹೆಚ್ಚಾಗಿ, ಚರ್ಮದ ಕಾಂತಿ ವೃದ್ಧಿಯಾಗಲು ಸಹಕಾರಿಯಾಗಲಿದೆ.
ಮೂಳೆಗಳಿಗೆ ಬಲ: ಸೌತೆಕಾಯಿಯಲ್ಲಿರುವ ವಿಟಮಿನ್ ಕೆ ಅಂಶವು ದೇಹಕ್ಕೆ ಅಗತ್ಯವಿರುವ ವಿಟಮಿನ್ಸ್ ಸಂಗ್ರಹಿಸಲು ನೆರವಾಗುತ್ತದೆ.
ಕ್ಯಾನ್ಸರ್ ನಿಂದ ತಡೆ: ಸೌತೆಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ಗಳು ಕ್ಯಾನ್ಸರ್ ನಿಂದ ತಡೆಯಲು ಸಾಥ್ ನೀಡುತ್ತದೆ.