ಹೊಸದಿಲ್ಲಿ: ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ 5000 ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಈಗಾಗಲೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5194ಕ್ಕೆ ಏರಿಕೆ ಆಗಿದ್ದು, 401 ಜನರು ಗುಣಮುಖರಾಗಿದ್ದಾರೆ. 149 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಗೆ 35 ಜನ ಸಾವನ್ನಪ್ಪಿದ್ದು, 773 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ ಎಂದು ಎ.ಎನ್.ಐ.ವರದಿ ನೀಡಿದೆ.
ನೆನ್ನೆ ಸಂಜೆ 6ರಿಂದ ಇಂದು ಬೆಳಗ್ಗೆ 9 ಗಂಟೆಯೊಳಗೆ ಆಂಧ್ರ ಪ್ರದೇಶದಲ್ಲಿ 15 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅವರಲ್ಲಿ ಮೂವರು ಚಿತ್ತೂರಿನವರು, 6 ಮಂದಿ ನೆಲ್ಲೂರು ಮತ್ತು ಕೃಷ್ಣದ ನಿವಾಸಗಳಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 329ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.