Tuesday, July 5, 2022

Latest Posts

ದಿನಪತ್ರಿಕೆ ವಿತರಣೆಗೆ ನಿಷೇಧ: ಮಹಾ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್    

ಮುಂಬೈ :    ಮಹಾರಾಷ್ಟ್ರದಲ್ಲಿ  ದಿನಪತ್ರಿಕೆಗಳ  ಹಂಚಿಕೆಯನ್ನು   ನಿಷೇಧಿಸಿ  ರಾಜ್ಯ ಸರ್ಕಾರ  ಕೈಗೊಂಡ  ತೀರ್ಮಾನವನ್ನು   ಭಾರತೀಯ  ಪತ್ರಿಕಾ  ಮಂಡಳಿ   ಆಕ್ಷೇಪಿಸಿದೆ. ಇದೇ   ವೇಳೆ   ಮಹಾ  ಸರ್ಕಾರಕ್ಕೆ  ಕಾರಣ  ನೀಡುವಂತೆಯೂ   ಕೇಳಿದೆ.
  ಕೊರೋನಾ  ಸೋಂಕಿನ  ಹಿನ್ನೆಲೆಯಲ್ಲಿ   ಇಲ್ಲಿನ  ಸರ್ಕಾರ    ಎಲ್ಲ  ದಿನಪತ್ರಿಕೆಗಳನ್ನು   ಮನೆಮನೆಗೆ   ಮತ್ತು  ಅಂಗಡಿಗಳಿಗೆ  ರವಾನಿಸುವುದನ್ನು  ನಿಷೇಧಿಸಿದ್ದು, ಇದು  ಕೇಂದ್ರ    ಸರ್ಕಾರ  ಈಗಾಗಲೇ  ಜಾರಿಗೊಳಿಸಿರುವ   ಲಾಕ್‌ಡೌನ್  ಮಾರ್ಗಸೂಚಿಗೆ  ವಿರುದ್ಧವಾಗಿದೆ ಎಂದು    ಪ್ರೆಸ್  ಕೌನ್ಸಿಲ್  ಅಧ್ಯಕ್ಷರಾದ  ನ್ಯಾ. ಸಿ. ಕೆ.  ಪ್ರಸಾದ್  ಹೇಳಿದ್ದಾರೆ.    ಮತ್ತೊಂದು  ಕಡೆ   ಔರಂಗಾಬಾದ್  ಹೈಕೋರ್ಟ್‌ನಲ್ಲಿ  ಈ  ಸಂಬಂಧ ಸಾರ್ವಜನಿಕ   ಹಿತಾಸಕ್ತಿ ರಿಟ್  ಅರ್ಜಿಯೊಂದು  ದಾಖಲಾಗಿದ್ದು  ಮಹಾರಾಷ್ಟ್ರ  ಸರ್ಕಾರಕ್ಕೆ  ನ್ಯಾಯಪೀಠ  ನೋಟಿಸ್   ಜಾರಿಮಾಡಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss