Monday, August 15, 2022

Latest Posts

ದಿನವೂ ಒಂದು ಹಿಡಿ ಒಣದ್ರಾಕ್ಷಿ ಸೇವಿಸಿ.. ನಿಮ್ಮ ಆರೋಗ್ಯದಲ್ಲಿ ಬದಲಾವಣೆ ನೋಡಿ.. ಒಣದ್ರಾಕ್ಷಿಯ ಲಾಭ ಏನು ಗೊತ್ತಾ?

ಎಲ್ಲ ಡ್ರೈ ಫ್ರೂಟ್ಸ್‌ಗಳಿಗಿಂತ ಕಡಿಮೆ ಹಣದಲ್ಲಿ ಸಿಗುವ ಡ್ರೈ ಫ್ರೂಟ್ ಯಾವುದು? ಹೌದು ನೀವು ಅಂದುಕೊಂಡಿದ್ದು ನಿಜವೇ. ಓಣದ್ರಾಕ್ಷಿ ಬೇರೆ ಡ್ರೈ ಫ್ರೂಟ್‌ಗಳ ರೇಟ್‌ಗೆ ಹೋಲಿಸಿದರೆ ಕಡಿಮೆಗೆ ಸಿಗುತ್ತದೆ. ಪ್ರತಿದಿನವೂ ದ್ರಾಕ್ಷಿ, ಗೋಡಂಬಿ,ಅಂಜೂರ,ಪಿಸ್ತಾ,ಬಾದಾಮಿ ಎಲ್ಲವನ್ನೂ ತಿನ್ನಬೇಕು ಎನ್ನುತ್ತಾರೆ. ಆದರೆ ಎಲ್ಲವೂ ಬಹಳ ದುಬಾರಿ. ಆದರೆ ದ್ರಾಕ್ಷಿ ಅಷ್ಟೊಂದು ದುಬಾರಿಯಿಲ್ಲ. ಆದರೆ ದ್ರಾಕ್ಷಿ ಸೇವಿಸುವುದರಿಂದ ಆರೋಗ್ಯಕ್ಕಾಗುವ ಪರಿಣಾಮ ತುಂಬಾನೆ ದುಬಾರಿ. ಪ್ರತಿನಿತ್ಯ ಒಂದು ಹಿಡಿ ದ್ರಾಕ್ಷಿ ಸೇವಿಸುವುದರಿಂದ ಇಷ್ಟು ಲಾಭ ನೋಡಿ..

  • ರಕ್ತ ಶುದ್ಧಿ: ಪ್ರತಿನಿತ್ಯ ದ್ರಾಕ್ಷಿ ಸೇವಿಸುವುದರಿಂದ ರಕ್ತ ಶುದ್ಧಿಯಾಗುತ್ತದೆ. ನಿಮಗೆ ಅಲರ್ಜಿ, ಕಜ್ಜಿ,ಕುರ,ತುರಿಕೆ ಸಮಸ್ಯೆ ಬರುತ್ತಿದೆ ಎಂದರೆ ರಕ್ತ ಶುದ್ಧವಾಗಿಲ್ಲ ಎಂದೇ ಅರ್ಥ. ಹಾಗಾಗಿ ದಿನವೂ ಇದನ್ನು ಸೇವಿಸಿ ರಕ್ತಶುದ್ಧಿಯಾಗಿಟ್ಟುಕೊಳ್ಳಿ.
  • ತೂಕ ಇಳಿಕೆ: ತಿಂದು ತೂಕ ಇಳಿಸಬಹುದಾದರೆ ಏಕೆ ತಿನ್ನಬಾರದು ಹೇಳಿ.. ಫ್ಯಾಟ್ ಸೆಲ್‌ಗಳನ್ನು ಬರ್ನ್ ಮಾಡಲು ದ್ರಾಕ್ಷಿ ಸಹಕಾರ ಮಾಡುತ್ತದೆ. ಜೊತೆಗೆ ಇದರಲ್ಲಿರುವ ಗ್ಲೂಕೋಸ್ ದಿನವಿಡೀ ಎನರ್ಜಿ ನೀಡುತ್ತದೆ. ಹಾಗಾಗಿ ತೂಕ ಇಳಿಕೆ ಗ್ಯಾರೆಂಟಿ.
  • ಮೂಳೆಗಳ ಆರೋಗ್ಯ: ದ್ರಾಕ್ಷಿಯಲ್ಲಿರುವ ಕೆಥೆಚಿನ್ಸ್‌ದಿಂದ ಫ್ರೀ ರ‍್ಯಾಡಿಕಲ್ಸ್‌ಗಳು ಹೊರಹೋಗುತ್ತವೆ. ಇದರಿಂದ ಮೂಳೆಗಳ ಆರೋಗ್ಯ ವೃದ್ಧಿಯಾಗುತ್ತದೆ. ಹಾಗೇ ಇದರಲ್ಲಿ ಕ್ಯಾಲ್ಷಿಯಂ ಕೂಡ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ.
  • ಚರ್ಮಕ್ಕೆ ಒಳ್ಳೆಯದು: ಪ್ರತಿದಿನ ದ್ರಾಕ್ಷಿ ತಿನ್ನುವುದರಿಂದ ಎಲಾಸ್ಟಿಸಿಟಿ ಹೆಚ್ಚುತ್ತದೆ. ಚರ್ಮದಲ್ಲಿ ಹೊಸ ಹೊಳಪು ಮೂಡುತ್ತದೆ.
  • ಹಲ್ಲು ಹುಳುಕಾಗದು: ಡೆಂಟಿಸ್ಟ್ ಹತ್ತಿರ ಹೋಗುವುದೇ ಬೇಡ ಎನ್ನುವವರು ಪ್ರತಿದಿನ ದ್ರಾಕ್ಷಿ ತಿನ್ನಿ. ಹಲ್ಲು ಹುಳುಕು, ಬಾಯಿಯಲ್ಲಿ ಬ್ಯಾಕ್ಟೀರಿಯಾ ಹೋಗುತ್ತದೆ. ವಿಟಮಿನ್ ಎ ಇರುವುದರಿಂದ ಕಣ್ಣಿಗೂ ಒಳ್ಳೆಯದು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss