ಪುರಾತನ ಕಾಲದಿಂದಲೂ ಆಯುರ್ವೇದದ ಔಷಧಗಳಲ್ಲಿ ಜೇನುತುಪ್ಪಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ದೇಶದಿಂದ ವಿದೇಶದವರೆಗೂ ಜೇನುತುಪ್ಪ ಎಲ್ಲರೂ ಬಳಸುತ್ತಾರೆ. ಜೇನುತುಪ್ಪದಿಂದ ತ್ವಚೆ,ಕೂದಲ ಆರೋಗ್ಯಷ್ಟೇ ಅಲ್ಲ. ಮನುಷ್ಯನ ದೇಹಕ್ಕೂ ಜೇನುತುಪ್ಪ ಒಳ್ಳೆಯ ಅಂಶಗಳನ್ನು ನೀಡುತ್ತದೆ.
ಹಾಗಾದರೆ ದಿನವೂ ಜೇನುತುಪ್ಪ ಸೇವಿಸುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಲಾಭವಿದೆ ತಿಳಿದುಕೊಳ್ಳೋಣ…
- ಇದರಲ್ಲಿ ಆಂಟಿಆಕ್ಸಿಡೆಂಟ್ಸ್: ಜೇನುತುಪ್ಪದಲ್ಲಿರುವ ಆಂಟಿ ಆಕ್ಸಿಡೆಂಟ್ಸ್ ನಮ್ಮ ದೇಹದಲ್ಲಿ ಸೆಲ್ ಡ್ಯಾಮೇಜ್ ಆಗದಂತೆ ತಡೆಗಟ್ಟುತ್ತದೆ. ಹಾರ್ಟ್ ಅಟ್ಯಾಕ್, ಕ್ಯಾನ್ಸರ್ ರೀತಿಯ ರೋಗಗಳಿಂದ ನಿಮ್ಮನ್ನು ದೂರ ಇಡುತ್ತದೆ.
- ಫಂಗಸ್ ಸಾಯಿಸುತ್ತದೆ: ದೇಹದಲ್ಲಿ ಬೇಡವಾದ ಬ್ಯಾಕ್ಟೀರಿಯಾ, ಫಂಗಸ್ನ್ನು ಹನಿ ಸಾಯಿಸುತ್ತದೆ. ಇದಕ್ಕೆ ಪ್ಯೂರ್ ಹನಿ ಬಳಸುವುದು ತುಂಬಾ ಮುಖ್ಯವಾಗಿದೆ.
- ಗಾಯ ಮಾಯ: ಅಂಗಡಿಯಲ್ಲಿ ಸಿಗುವ ಜೇನುತುಪ್ಪವಲ್ಲದೆ, ಮನೆಯಲ್ಲಿ ಫ್ರೆಶ್ ಆಗಿ ಸಿಗುವ ಜೇನುತುಪ್ಪವನ್ನು ದಿನವೂ ಸೇವಿಸಿದರೆ, ಬಿದ್ದ ಗಾಯಗಳು ಬೇಗ ಮಾಯವಾಗುತ್ತವೆ. ಪ್ಯೂರ್ ಹನಿ ಸಿಕ್ಕರೆ ಅದನ್ನು ಗಾಯದ ಮೇಲೂ ಹಚ್ಚಿಕೊಳ್ಳಬಹುದು.
- ಜೀರ್ಣಕ್ರಿಯೆಗೆ ಸಹಕಾರಿ: ಬೇಧಿ ಬ್ಯಾಕ್ಟೀರಿಯಾಗಳಿಂದ ಬಂದ ಹೊಟ್ಟೆನೋವು, ಹುಣ್ಣು ಜೇನುತುಪ್ಪ ತಿನ್ನುವುದರಿಂದ ಮಾಯವಾಗುತ್ತದೆ.
- ಎದೆಯಲ್ಲಿ ಕಫ ಕರಗಿಸಲು: ಈರುಳ್ಳಿ ರಸ, ಶುಂಠಿ ರಸ ಹಾಗೂ ಜೇನುತುಪ್ಪ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ವಾಂತಿ ರೀತಿಯಲ್ಲಿ ಕಫ ಹೊರಗೆ ಹೋಗುತ್ತದೆ.