ಜೇನುತುಪ್ಪ ಯಾರಿಗೆ ಇಷ್ಟವಿಲ್ಲ ಹೇಳಿ..ಪ್ರತಿಯೊಬ್ಬರಿಗೂ ಜೇನುತುಪ್ಪ ಇಷ್ಟವೇ.. ನಿಸರ್ಗ ನಮಗೆ ಕೊಡುವ ಅದ್ಭುತ ಉಡುಗೊರೆಯಲ್ಲಿ ಜೇನುತುಪ್ಪ ಕೂಡ ಒಂದು. ಒಂದೆಡೆ ಆಹಾರ ಪದಾರ್ಥವಾಗಿ ಇನ್ನೊಂದೆಡೆ ಆರ್ಯುವೇದದ ಮುಖ್ಯ ಔಷಧಿಯಾಗಿ ಈ ಜೇನುತುಪ್ಪವನ್ನು ಬಳಸುತ್ತಾರೆ.
ಪುಟ್ಟ ಪುಟ್ಟ ಜೇನುಹುಳಗಳು ಸಂಗ್ರಹಿಸುವ ಆ ಒಂದೊಂದು ಹನಿಯೂ ಸಹ ಅದೆಷ್ಟೋ ಆರೋಗ್ಯಕರವಾದ ಗುಣಗಳನ್ನು ಬಚ್ಚಿಟ್ಟುಕೊಂಡಿದೆ ತಿಳಿದುಕೊಳ್ಳೊಣ.
#ಕೆಮ್ಮು, ಕಫ:
ಕೆಮ್ಮು, ಕಫ ಹೆಚ್ಚಿದ್ದಾಗಾ ಜೇನುತುಪ್ಪಕ್ಕೆ ಶುಂಠಿರಸವನ್ನು ಸೇರಿಸಿಕೊಂಡು ದಿನದಲ್ಲಿ ಮೂರು ಹೊತ್ತು ಸೇವಿಸುವುದರಿಂದ ಕೆಮ್ಮು, ಕಫದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
# ತೂಕ ಇಳಿಸಲು:
ತೂಕಹೆಚ್ಚಿರುವವರು, ಬೊಜ್ಜು ಬಂದವರು ತೂಕ ಕಡಿಮೆ ಮಾಡಲು ಉಗರು ಬರಚ್ಚಗಿನ ನೀರಿಗೆ ಜೇನುತುಪ್ಪ ಮಿಶ್ರಣಮಾಡಿಕೊಂಡು ದಿನ ನಿತ್ಯ ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.
#ಮುಖದ ಕಾಂತಿ:
ಮುಖದ ಕಾಂತಿ ಹೆಚ್ಚಿಸಲು ಜೇನುತುಪ್ಪ ಬಹಳ ಉಪಯೋಗಕಾರಿ. ಜೇನುತುಪ್ಪಕ್ಕೆ ಅರಿಶಿಣ ಮಿಶ್ರಣ ಮಾಡಿ ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚುತ್ತದೆ. ದಿನ ನಿತ್ಯ ಹಚ್ಚುವುದರಿಂದ ಮುಖದಲ್ಲಿ ಮೊಡವೆ ಕೂಡ ಕಡಿಮೆ ಆಗುತ್ತದೆ.
#ಬಾಯಿ ಹುಣ್ಣು:
ಉಷ್ಣದಿಂದ ಬಾಯೊಳಗೆ ಹುಣ್ಣಾಗಿದ್ದರೆ ಜೇನುತುಪ್ಪ ಹಚ್ಚುವುದರಿಂದ, ನೀರಿನೊಡನೆ ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಹುಣ್ಣು ವಾಸಿಯಾಗುತ್ತದೆ. ಮತ್ತು ಹುಣ್ಣು ಆಗದಂತೆ ತಡೆಯುತ್ತದೆ.
#ಹೃದಯ ಸಂಬಂಧಿ ಕಾಯಿಲೆ:
ಜೇನುತುಪ್ಪದಲ್ಲಿ ಪೊಟ್ಯಾಷಿಯಂ ಮತ್ತು ಖನಿಜಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ಹೃದಯ ಸಂಬಂಧಿ ಖಾಯಿಲೆ ಇರುವವರಿಗೆ ಒಳ್ಳೆಯದು. ಬಹು ಬೇಗ ಹೃದಯ ಸಂಬಂಧಿ ಕಾಯಿಲೆ ಗುಣವಾಗಮಾಡುತ್ತದೆ.
# ಅಂಗಾಂಶ ಪೋಷಣೆ:
ಒಂದೆರಡು ಚಮಚಗಳಷ್ಟು ಜೇನುತುಪ್ಪವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಸೇವಿಸುತ್ತಾ ಬಂದರೆ ಅಂಗಾಂಶಗಳು ಪೋಷಣೆಗೊಂಡು ನರಮಂಡಲದ ದೌರ್ಬಲ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ.
#ಸುಟ್ಟ ಗಾಯ:
ಸುಟ್ಟ ಗಾಯಕ್ಕೆ ತಕ್ಷಣ ಜೇನು ತುಪ್ಪ ಹಚ್ಚುವುದರಿಂದ ಉರಿ ಕಡಿಮೆಯಾಗುವುದರ ಜೊತೆಗೆ ಕಲೆಗಳು ಮಾಯವಾಗುತ್ತವೆ. ಆದರೆ ತಕ್ಷಣ ಹಚ್ಚಬೇಕಾಗುತ್ತದೆ.
#ಕೀಲು ನೋವು:
ಕೀಲುಗಳಲ್ಲಿ ನೋವಿದ್ದರೆ ಆ ಜಾಗಕ್ಕೆ ಜೇನು ತುಪ್ಪದ ಜೊತೆ ಸುಣ್ಣವನ್ನು ಬೆರೆಸಿ ಹೆಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
ಹನಿ ಜೇನಿನಲ್ಲಿ ಹೇರಳವಾಗಿ ಔಷಧಿಯ ಗುಣವಿದೆ ಆಗಾಗಾ ಅದನ್ನು ಬಳಸುತ್ತಿರಿ.