ನಿಮ್ಮ ಆಹಾರ ಪದ್ಧತಿಗೆ ಪೂರಕವಾಗಿದೆ ಆರೋಗ್ಯ.. ನಿಮ್ಮ ಬೆಳಗ್ಗಿನ ಆಹಾರ ಪದ್ಧತಿ
ನಮಗೆ ಆರೋಗ್ಯದ ಮೇಲೆ ಕಾಳಜಿ ಇರುತ್ತದೆ. ಆದರೆ ಹೇಗೆ ಕಾಳಜಿ ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ನಿಮ್ಮ ಆಹಾರ ಪದ್ಧತಿಗೆ ಅನುಸಾರವಾಗಿಯೇ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ. ಬೆಳಿಗ್ಗೆ ಹೇಗಿರಬೇಕು ನಿಮ್ಮ ಆಹಾರ ಪದ್ಧತಿ ಎಂಬುದು ಇಲ್ಲಿದೆ ಓದಿ.
ಉಗುರು ಬಿಸಿ ನೀರು:
ನೀವು ಎದ್ದ ತಕ್ಷಣ ಉಗುರು ಬಿಸಿ ನೀರನ್ನು ಮುಖ ತೊಳೆಯುವ ಮೊದಲು ಸೇವಿಸಬೇಕು. ಬಾಯಲ್ಲಿ ಉತ್ಪತ್ತಿಯಾಗಿರುವ ಲಾಲಾರಸ ನಿಮ್ಮ ಹೊಟ್ಟೆಗೆ ಹೋಗಬೇಕು. ಬಿಸಿ ನೀರು ಕುಡಿದರೆ ವಿಸರ್ಜನೆಗಳಿಗೆ ಅನುಕೂಲವಾಗುತ್ತದೆ. ಹೊಟ್ಟೆ ಕ್ಲೀಯರ್ ಆಗುತ್ತದೆ.
ಬಾದಾಮಿ ಸೇವಿಸಿ:
ಬಾದಾಮಿಯನ್ನು ರಾತ್ರಿ ನೆನಸಿಟ್ಟುಕೊಳ್ಳಿ. ಬೆಳಿಗ್ಗೆ ತಿಂಡಿಗೂ ಮೊದಲು ಅದನ್ನು ಅಗೆದು ತಿನ್ನಿರಿ. ನಿಮಗೆ ದಿನವಿಡಿ ಬೇಕಾಗುವಂತಹ ಪ್ರೋಟಿನ್ನ್ನು ಕೊಡುತ್ತದೆ. ಬಾದಾಮಿ ತಿನ್ನುವುದು ರೂಢಿಸಿಕೊಳ್ಳಿ
ತಿಂಡಿಗೂ ಅರ್ಧ ಗಂಟೆ ಮೊದಲು ನೀರು ಸೇವಿಸಿ:
ಬೆಳಿಗ್ಗೆ ನೀವು ಎಷ್ಟು ಗಂಟೆಗೆ ತಿಂಡಿ ತಿನ್ನುತ್ತೀರೋ ಅದಕ್ಕೂ ಅರ್ಧ ಗಂಟೆ ಮೊದಲು ನೀರನ್ನು ಸೇವಿಸಿ. ತಿಂಡಿ ತಿನ್ನುವಾಗ, ತಿಂಡಿ ತಿಂದ ತಕ್ಷಣ ನೀರನ್ನು ಸೇವಿಸಬಾರದು.
ಮನೆ ಅಡುಗೆಯನ್ನೇ ಸೇವಿಸಿ:
ಆದಷ್ಟು ಮನೆ ಅಡುಗೆಯನ್ನೇ ಬೆಳಿಗ್ಗೆ ಸೇವಿಸಿ. ಹೊಟೆಲ್, ಕ್ಯಾಟಿನ್ಗಲ್ಲಿ ಬೆಳಿಗ್ಗೆ ತಿಂಡಿ ತಿನ್ನುವುದನ್ನು ನಿಲ್ಲಿಸಿ. ಅಲ್ಲಿ ಸೋಡಾ, ಎಣ್ಣೆ ಜಾಸ್ತಿ ಹಾಕಿರುವುದರಿಂದ ನಿಮ್ಮ ಅರೋಗ್ಯ ಕೆಡುತ್ತದೆ. ಮನೆಯಲ್ಲಿಯೇ ರುಚಿಯಾದ ಅಡುಗೆ ಮಾಡಿಕೊಂಡು ಸೇವಿಸಿ.
ಹೊಟ್ಟೆ ಖಾಲಿ ಬಿಡಬೇಡಿ.
ನೀವು ಬೆಳಿಗ್ಗೆ ಎದ್ದ ಒಂದು ತಾಸಿನಲ್ಲಿ ಆಹಾರವನ್ನು ಸೇವಿಸಿ. ಏಕೆಂದರೆ ಹೊಟ್ಟೆ ಖಾಲಿ ಬಿಟ್ಟರೆ ಎಸಿಡಿಟಿ ಶುರುವಾಗುತ್ತದೆ. ತಿಂಡಿ ತಿನ್ನುವಾಗ ಹೊಟ್ಟೆ ತುಂಬ ತಿನ್ನಿರಿ. ಆಗಾಗ ಸೇವಿಸುವುದು ಬೇಡ. ಆದರೆ ಎಂದಿಗೂ ಬೆಳಗಿನ ಆಹಾರವನ್ನು ಬಿಡಬೇಡಿ.
ಎಣ್ಣೆ ಪದಾರ್ಥದಿಂದ ದೂರವಿರಿ:
ಬೆಳ್ ಬೆಳಗ್ಗೆ ಎಣ್ಣೆ ಪದಾರ್ಥವನ್ನು ಸೇವಿಸಬೇಡಿ. ಉದಾ: ಬೊಂಡಾ, ಪೂರಿ, ಬನ್ಸ್ ಈ ರೀತಿಯ ಆಹಾರವನ್ನು ಬೆಳಿಗ್ಗೆ ಸೇವಿಸಬೇಡಿ. ದೋಸಾ, ಉಪ್ಪಿಟ್ಟು, ರೈಸ್ ಬಾತ್ ಈ ರೀತಿಯ ಆಹಾರಗಳನ್ನೇ ಸೇವಿಸಿ.
ಆಹಾರವನ್ನು ಅಗೆದು ತಿನ್ನಿ:
ಆಫೀಸ್ ಹೋಗುವ ಗಡಿಬಿಡಿ, ಶಾಲೆಗೆ, ಕಾಲೇಜ್ಗೆ ಎಂದು ಬೇಗ ಬೇಗ ತಿಂಡಿಯನ್ನು ಅಗೆಯದೇ ತಿನ್ನುತ್ತೀರಿ. ಹೀಗೆ ಮಾಡಿದರೆ ಜೀರ್ಣಕ್ರೀಯೆ ಸರಿಯಾಗಿ ಆಗುವುದಿಲ್ಲ. ಅಜೀರ್ಣವಾಗುತ್ತದೆ. ಆದಷ್ಟು ಆಹಾರವನ್ನು ನಿಧಾನವಾಗಿ ಅಗೆದು ತಿನ್ನಿರಿ.