Friday, July 1, 2022

Latest Posts

ದಿಲ್ಲಿಯಲ್ಲಿ ನಿರಾಶೆಯ ಮತದಾನ: ಶೇ.30.18

ಹೊಸದಿಲ್ಲಿ: ರಾಜಧಾನಿ ದಿಲ್ಲಿಯಲ್ಲಿ ವಿಧಾನ ಸಭಾ ಚುನಾವಣೆ ನಡೆಯುತಿದ್ದು, ಮಧ್ಯಾಹ್ನ 3 ಗಂಟೆಯ ವೇಳೆಗೆ ಶೇ.30.18 ರಷ್ಟು ಮತದಾನವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿದ್ದ ಶಹೀನ್ ಭಾಗ್ ನಲ್ಲಿ ಹೆಚ್ಚಿನ ಮತದಾನ ನಡೆದಿದೆ.

ದಿಲ್ಲಿಯಲ್ಲಿ 1.47ಕೋಟಿ ದಾಖಲಾದ ಮತದಾರರಿದ್ದು, ಬೆಳಗ್ಗೆ 8ರಿಂದ ನಿರಾಶೆಯ ಮತದಾನ ನಡೆಯುತ್ತಿದೆ. ಬೆಳಗ್ಗೆ 10 ಗಂಟೆ ಸಮಯದಲ್ಲೂ ಕೇವಲ 4.33ರಷ್ಟು ಮತದಾನವಾಗಿತ್ತು. 3ಗಂಟೆ ಸುಮಾರಿಗೆ ಶೇ.30.18ರಷ್ಟು ಮತದಾನವಾಗಿದ್ದು ಎಲ್ಲರಲ್ಲೂ ಬೇಸರ ವ್ಯಕ್ತವಾಗಿದೆ.

ಆಮ್ ಆದ್ಮಿ ಪಾರ್ಟಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಆಶಯಹೊಂದಿದ್ದರೆ, ಭಾರತೀಯ ಜನತಾ ಪಾರ್ಟಿ ದಿಲ್ಲಿಯಲ್ಲಿ ಖಚಿತವಾಗಿ ಅಧಿಕಾರ ಗಳಿಸುವುದರ ಕುರಿತು ವಿಶ್ವಾಸ ಹೊಂದಿದೆ. 2013ರ ವರೆಗೆ ದಿಲ್ಲಿಯಲ್ಲಿ ಅಧಿಕಾರ ನಡೆಸಿದ್ದ ಕಾಂಗ್ರೆಸ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಕನಸುಕಾಣುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss