Tuesday, June 28, 2022

Latest Posts

ದೀದಿ ಗೆ ಆಘಾತದ ಮೇಲೆ ಆಘಾತ: ರಾಜ್ಯಸಭಾ ಸದಸ್ಯತ್ವಕ್ಕೆ ದಿನೇಶ್​ ತ್ರಿವೇದಿ ರಾಜೀನಾಮೆ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ.
ಹೌದು, ಪಕ್ಷದ ಪ್ರಮುಖರು ಎನಿಸಿಕೊಂಡಿರುವವರು ಒಬ್ಬರಾದ ಮೇಲೆ ಒಬ್ಬರಂತೆ ರಾಜೀನಾಮೆ ಪತ್ರ ಹಾಕಿ ಬಿಜೆಪಿ ಸೇರುತ್ತಿದ್ದು, ಇಂದು ಕೂಡ ಇದೇ ಮಾದರಿಯ ಬೆಳವಣಿಗೆ ನಡೆದಿದೆ.
ಇದೀಗ ರಾಜ್ಯಸಭಾ ಸದಸ್ಯತ್ವಕ್ಕೆ ದಿನೇಶ್​ ತ್ರಿವೇದಿ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಅವರ ಮುಂದಿನ ನಡೆ ಏನು ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ.
ಈ ಬಗ್ಗೆ ಮಾತನಾಡಿರುವ ದಿನೇಶ್​ ತ್ರಿವೇದಿ, ನನ್ನನ್ನು ರಾಜ್ಯಸಭೆಗೆ ಕಳುಹಿಸಿದ್ದಕ್ಕಾಗಿ ನಾನು ಪಕ್ಷಕ್ಕೆ ಕೃತಜ್ಞನಾಗಿದ್ದೇನೆ. ಆದರೆ, ನಮ್ಮ ರಾಜ್ಯದಲ್ಲಿ ಮಿತಿಮೀರಿ ಹಿಂಸಾಚಾರ ನಡೆಯುತ್ತಿದೆ. ಆ ಬಗ್ಗೆ ಇಲ್ಲಿ ಮಾತನಾಡಲು ನನಗೆ ಸಾಧ್ಯವಾಗುತ್ತಿಲ್ಲ. ಇದು ನನಗೆ ಉಸಿರುಗಟ್ಟಿಸುವಂತಾಗಿದೆ. ಇಲ್ಲಿ ಕುಳಿತುಕೊಂಡು ಏನು ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡು ಎಂದು ನನ್ನ ಮನಃಸಾಕ್ಷಿ ಹೇಳಿದೆ. ಈ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss