ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಬಾಕಿಯಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮತ್ತೊಂದು ಅಘಾತ ಉಂಟಾಗಿದೆ.
ಹೌದು, ಇತ್ತೀಚೆಗೆ ಸುವೇಂದು ಅಧಿಕಾರಿ ಸೇರಿ ಏಳು ಶಾಸಕರು ಪಕ್ಷ ಬಿಟ್ಟು ಹೊರನಡೆದಿದ್ದರು. ಇದೀಗ ಇದರ ಬೆನ್ನಲ್ಲೇ ಮತ್ತೋರ್ವ ಶಾಸಕ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.
ನಾಡಿಯಾ ಜಿಲ್ಲೆಯ ಸಂತಪುರದ ಶಾಸಕರಾದ ಅರಿಂದಂ ಭಟ್ಟಾಚಾರ್ಯರು ಟಿಎಂಸಿ ತ್ಯಜಿಸಿದ್ದು, ಬಿಜೆಪಿ ಸೇರಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕೈಲಾಶ್ ವಿಜಯವರ್ಗಿಯಾ ಅವರನ್ನು ನವದೆಹಲಿಯಲ್ಲಿ ಭೇಟಿಯಾದ ಅವರು, ಪಕ್ಷದ ರಾಷ್ಟ್ರೀಯ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರಿದರು.
ಅರಿಂದಮ್ ಭಟ್ಟಾಚಾರ್ಯ ಅವರು 2016 ರಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ್ದರು. ಅದರ ಮುಂದಿನ ವರ್ಷ ಟಿಎಂಸಿಗೆ ಸೇರ್ಪಡೆಯಾಗಿದ್ದರು.
ಪಶ್ಚಿಮ ಬಂಗಾಳ ಈಗ ಮೋದಿಜಿಯ ಆತ್ಮನಿರ್ಭರ ಭಾರತ ಮಂತ್ರದೊಂದಿಗೆ ಗುರುತಿಸಿಕೊಳ್ಳಲು ಬಯಸಿದೆ. ನಮಗೆ ಆತ್ಮನಿರ್ಭರ ಪಶ್ಚಿಮ ಬಂಗಾಳ ಬೇಕು, ಎಂದು ಅರಿಂದಂ ಭಟ್ಟಾಚಾರ್ಯ ಹೇಳಿದರು.