Wednesday, June 29, 2022

Latest Posts

ದೀದಿ ಸರಕಾರದಿಂದ ಪಶ್ಚಿಮ ಬಂಗಾಳ ನಾಶ: ಪ್ರಧಾನಿ ಮೋದಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಪ್ರತಿಯೊಬ್ಬ ರೈತನಿಗೆ ಪ್ರತಿ ವರ್ಷ 6,000 ನೀಡುವ ಕೇಂದ್ರದ ಪಿಎಂ-ಕಿಸಾನ್‌ ಯೋಜನೆಯನ್ನು ಮಮತಾ ಬ್ಯಾನರ್ಜಿ ಸರ್ಕಾರ ಜಾರಿಗೊಳಿಸದ ಕಾರಣ ಪಶ್ಚಿಮ ಬಂಗಾಳದ 70 ಲಕ್ಷ ರೈತರಿಗೆ ಈ ಲಾಭ ಸಿಗದಂತಾಗಿದೆ. ಮಮತಾ ಅವರು ಪಶ್ಚಿಮ ಬಂಗಾಳವನ್ನು ನಾಶಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ದೇಶದ ಎಲ್ಲಾ ರಾಜ್ಯಗಳ ರೈತರಿಗೂ ಸಿಗುತ್ತಿದೆ. ಆದರೆ ಪಶ್ಚಿಮ ಬಂಗಾಳದ ರೈತರಿಗೆ ಮಾತ್ರ ಇದರ ಲಾಭ ಸಿಗುತ್ತಿಲ್ಲ. ರಾಜಕೀಯ ಕಾರಣಗಳಿಂದಾಗಿ ಬಂಗಾಳ ಸರ್ಕಾರ ರೈತರಿಗೆ ಲಾಭ ಪಡೆಯಲು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ರೈತರೇ ನೇರವಾಗಿ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಅಂತಾ ಆರೋಪಿಸಿದರು.ಅಲ್ಲಿನ ವಿರೋಧ ಪಕ್ಷದ ನಾಯಕರು ಯಾಕೆ ಮೌನ ವಹಿಸಿದ್ದಾರೆ? ಪಶ್ಚಿಮ ಬಂಗಾಳದ ಸ್ಥಿತಿಯ ಬಗ್ಗೆ ಮೌನವಾಗಿರುವವರು ದೆಹಲಿಯ ಆರ್ಥಿಕತೆಯನ್ನು ತಡೆಯುವಲ್ಲಿ ನಿರತರಾಗಿದ್ದಾರೆ. ಆದರೆ ಈ ಪಕ್ಷಗಳು ಕೇರಳದಲ್ಲಿ ಎ.ಪಿ.ಎಂ.ಸಿ-ಮಂಡಿಗಳು ಇಲ್ಲ ಎಂಬುದನ್ನು ಪದೇ ಪದೇ ಮರೆತುಬಿಡುತ್ತಾರೆ ಎಂದು ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss