ಹೊಸದಿಗಂತ ವರದಿ,ಮೈಸೂರು:
ದೀಪಾವಳಿಯ ಹಬ್ಬ ಮುಗಿದ ನಂತರವೂ ಪಟಾಕಿ ಮಾರಾಟ ಮಾಡುತ್ತಿದ್ದ ಮೂವರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ.೧೪ ರಿಂದ ೧೬ರ ತನಕ ನಗರದಲ್ಲಿ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಪೊಲೀಸರು ಅನುಮತಿ ನೀಡಿದ್ದರು. ಆದರೆ ಮೈಸೂರಿನ ನ್ಯೂ ಕಾಂತರಾಜ್ ಅರಸ್ ರಸ್ತೆಯ ಕಾಳಮ್ಮ ದೇವಸ್ಥಾನದ ಸಮೀಪ ಖಾಲಿ ನಿವೇಶನದಲ್ಲಿ ಮಂಜುನಾಥ, ಬಾಲಚಂದ್ರ ಹಾಗೂ ಕೃಷ್ಣ ಎಂಬವರು ನೀಡಿದ್ದ ಅನುಮತಿ ಅವಧಿ ಮುಗಿದಿದ್ದರೂ ಪಟಾಕಿ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪಟಾಕಿಗಳನ್ನು ವಶಕ್ಕೆ ತೆಗೆದುಕೊಂಡು ಈ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ