ಹೊಸ ದಿಗಂತ ಆನ್ಲೈನ್ ಡೆಸ್ಕ್:
ಎಲ್ಲರ ಅಚ್ಚುಮೆಚ್ಚಿನ ವಾಟ್ಸ್ಆಪ್ ಈ ಬಾರಿ ತನ್ನ ಬಳಕೆದಾರರಿಗೆ ದೀಪಾವಳಿ ಗಾಗಿ ಹಲವಾರು ಆನಿಮೇಟೆಡ್ ಸ್ಟಿಕ್ಕರ್ಳನ್ನ ಪರಿಚಯಿಸಿದೆ.
ಇಲ್ಲಿ ಬಳಕೆದಾರರ ಭಾವನೆಗಳಿಗೆ ಅನುಗಣವಾಗಿ ಸ್ಟಿಕ್ಕರ್ಗಳನ್ನ ಕಳುಹಿಸುವ ಆಯ್ಕೆ ಕೂಡಾ ನೀಡಲಾಗಿದೆ. ಅದನ್ನು ಡೌನ್ಲೋಡ್ ಮಾಡುವುದು, ಕಳುಹಿಸುವುದು ಹೇಗೆ?
ವಿವರ ಇಲ್ಲಿದೆ…
ಅನ್ನೊದನ್ನ ಈ ಲೇಖನದಲ್ಲಿ ಹಂತ ಹಂತವಾಗಿ ತಿಳಿಸಿಕೊಡ್ತೀವಿ ಓದಿರಿ.
1. ಮೊದಲು ವಾಟ್ಸ್ಆಪ್ ತೆರೆಯಬೇಕು, ದೀಪಾವಳಿ ಸ್ಟಿಕ್ಕರ್ಗಳನ್ನು ಕಳುಹಿಸಲು ಬಯಸುವ ವ್ಯಕ್ತಿಯನ್ನು ಸರ್ಚ್ ಮಾಡಬೇಕು.
2. ನಂತರ ಎಮೋಜಿ ಐಕಾನ್ ಕ್ಲಿಕ್ ಮಾಡಿ ಮತ್ತು ’+’ ಐಕಾನ್ ಆಯ್ಕೆಮಾಡಬೇಕು. ಅಲ್ಲಿ ಸ್ಟಿಕ್ಕರ್ಗಳ ಒಂದು ಶ್ರೇಣಿ ಸಿಗುತ್ತದೆ. ಅವುಗಳನ್ನು ಕಳುಹಿಸಲು ಸ್ಟಿಕ್ಕರ್ ಪ್ಯಾಕ್ ಡೌನ್ಲೋಡ್ ಮಾಡಿಕೊಳ್ಳಬೇಕು.
3. ಅಲ್ಲಿ ನಿಮ್ಮ ಆಯ್ಕೆಯ ಸ್ಟಿಕ್ಕರ್ ನಿಮಗೆ ಸಿಗದಿದ್ದರೆ, ಕೆಳಗೆ ಹೋಗಿ ಗೆಟ್ ಮೋರ್ ಸ್ಟಿಕ್ಕರ್ಗಳನ್ನು ಕ್ಲಿಕ್ ಮಾಡಿ, ಇದು ಸ್ಟಿಕ್ಕರ್ಗಳನ್ನು ಪ್ಲೇ ಸ್ಟೋರ್ನಿಂದ ನೇರವಾಗಿ ಡೌನ್ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ.
4. ಇದಾದ ನಂತರ ಅವುಗಳನ್ನು ವಾಟ್ಸಾಪ್ ಮೂಲಕ ಕಳುಹಿಸಲು ಸ್ಟಿಕ್ಕರ್ ಪ್ಯಾಕ್ ಅನ್ನು ಡೌನ್ಲೋಡ್ ಮಾಡಬೇಕಾಗುತ್ತದೆ.
ಈ ಬಾರಿಯ ದೀಪಾವಳಿಗೆ ವಾಟ್ಸ್ ಆಪ್ ನೀಡಿರುವ ಕೊಡುಗೆಯನ್ನು ನೀವೂ ಬಳಸಿಕೊಂಡು ಸಂಭ್ರಮಿಸಿ!