Tuesday, November 24, 2020

Latest Posts

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...

6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ವೈರಸ್ ನಡುವೆ ದ್ವಿಪಕ್ಷೀಯ ಮಾತುತೆ ನಡೆಸಲು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ 6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲು ನ.24-29ರವರೆಗೆ ಜೈಶಂಕರ್ ಅವರು...

ರಾಷ್ಟ್ರ ರಾಜಧಾನಿಯಲ್ಲಿ ತಗ್ಗಿದ ಕೊರೋನಾ ಆರ್ಭಟ: ಸಾವಿನ ಪ್ರಮಾಣದಲ್ಲಿ ಇಳಿಕೆ?

ಹೊಸದಿಗಂತ ಆನ್ ಲೈನ್ ಡೆಸ್ಕ್: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 4,454 ಹೊಸ ಸೋಂಕಿತರು ಪತ್ತೆಯಾಗಿದ್ದು, 121 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೆಹಲಿ ಆರೋಗ್ಯ ಇಲಾಖೆ...

ದುಡಿಯುವ ಕೈಗಳಿಗೆ ಕೆಲಸ: ವಿದೇಶಗಳಿಗೆ ಹಾರುತ್ತಿರುವ ಅಡಿಕೆ ಹಾಳೆಯ ತಟ್ಟೆಗಳು!

ಎಂ.ಜೆ.ತಿಪ್ಪೇಸ್ವಾಮಿ

ಚಿತ್ರದುರ್ಗ: ಅಡಿಕೆ ಮರದಿಂದ ಉದುರಿದ ಹಾಳೆಗಳು ಗೊಬ್ಬರ, ಉರುವಲಿಗಾಗಿ ಬಳಸಲಾಗುತ್ತದೆ. ಅಲ್ಲದೇ ಸಾಕಷ್ಟು ಹಾಳೆಗಳು ಅಲ್ಲಿ ಇಲ್ಲಿ ಬಿದ್ದು ಹೋಗುತ್ತವೆ. ಹೀಗೆ ವ್ಯರ್ಥವಾಗುವ ಅಡಿಕೆ ಹಾಳೆಗಳನ್ನು ಸಂಗ್ರಹಿಸಿ ಅವುಗಳಿಂದ ಅಗತ್ಯ ವಸ್ತುಗಳನ್ನು ತಯಾರಿಸಬಹುದು. ಪರಿಸರ ಸ್ನೇಹಿ ಆಗಿರುವ ಅಡಿಕೆ ಹಾಳೆಗಳ ತಟ್ಟೆ ತಯಾರಿಕೆ ಇಂದು ಉದ್ಯಮವಾಗಿ ಬೆಳೆಯುತ್ತಿದೆ. ಅಲ್ಲದೇ ಒಂದಷ್ಟು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕಾರಣವಾಗಿದೆ. ಇಲ್ಲಿ ತಯಾರಾಗುವ ವಸ್ತುಗಳು ವಿದೇಶಗಳಿಗೆ ರಫ್ತಾಗುತ್ತಿವೆ.
ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ತಾಲೂಕುಗಳ ಗ್ರಾಮೀಣ ಭಾಗಗಳಲ್ಲಿ ಹೆಚ್ಚಾಗಿ ಈ ಕೇಂದ್ರಗಳನ್ನು ಕಾಣಬಹುದು. ಚಿತ್ರದುರ್ಗ ತಾಲೂಕಿನ ಗೊಡಬನಹಾಳ್ ಗ್ರಾಮದ ದಿವ್ಯಪ್ರಕಾಶ್ ಚಿತ್ರದುರ್ಗದ ಕೆಳಗೋಟೆಯ ಕೈಗಾರಿಕಾ ಪ್ರದೇಶದಲ್ಲಿರುವ ನೇಚರ್ ಫಸ್ಟ್ ಸಂಸ್ಥೆಯಡಿ ಎರಡು ವರ್ಷಗಳ ಈ ಉದ್ಯಮ ಆರಂಭಿಸಿದ್ದಾರೆ. ಇವರು ತಯಾರಿಸಿದ ವಸ್ತುಗಳನ್ನು ದೆಹಲಿ, ಕೊಯಮತ್ತೂರ್‌ಗೆ ಕಳಿಸುತ್ತಾರೆ. ಅಲ್ಲಿಂದ ಅಮೇರಿಕಾ, ಯೂರೋಪ್ ದೇಶಗಳಿಗೆ ಕಳಿಸಿಕೊಡಲಾಗುತ್ತಿದೆ.
ಈ ಕಾರ್ಖಾನೆಯಲ್ಲಿ ೨೦ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ. ಉತ್ತಮ ಬೇಡಿಕೆ ಇದ್ದ ಸಂದರ್ಭದಲ್ಲಿ ಸುಮಾರು ೩೫-೪೦ ಜನರು ಕೆಲಸ ಮಾಡುತ್ತಾರೆ. ಪ್ರೆಸ್ಸಿಂಗ್ ಮಾತ್ರ ಯಂತ್ರದಿಂದ ಮಾಡಲಾಗುತ್ತದೆ. ಉಳಿದಂತೆ ಹಾಳೆಗಳನ್ನು ತೊಳೆಯುವುದು, ಯಂತ್ರ ಚಾಲನೆ ಮಾಡುವುದು, ಪ್ಯಾಕ್ ಮಾಡುವುದು ಸೇರಿದಂತೆ ಮತ್ತಿತರ ಕೆಲಸಗಳಿಗೆ ಹೆಚ್ಚು ಕೆಲಸಗಾರರು ಬೇಕಾಗುತ್ತದೆ. ವ್ಯರ್ಥವಾಗಿ ಬಿದ್ದು ಹೋಗುವ ಅಡಿಕೆ ಹಾಳೆಗಳಿಂದ ಉಪಯುಕ್ತ ವಸ್ತುಗಳ ತಯಾರಿಸಲಾಗುತ್ತದೆ.
ವಿವಿಧ ಅಳತೆ ಹಾಗೂ ವಿನ್ಯಾಸದ ತಟ್ಟೆಗಳು  
ವಿವಿಧ ವಿನ್ಯಾಸ ಹಾಗೂ ಬೇರೆ ಬೇರೆ ಅಳತೆ ಹೊಂದಿದ ತಟ್ಟೆ, ಬಟ್ಟಲು, ಸ್ಪೂನ್‌ಗಳು ಸೇರಿ ದಿನಕ್ಕೆ ೮ ರಿಂದ ೧೦ ಸಾವಿರ ತಯಾರಾಗುತ್ತವೆ. ೮, ೧೦, ೧೨, ೧೪ ಇಂಚಿನ ದುಂಡು, ಚೌಕಾಕಾರದ ಪ್ಲೇಟುಗಳು ಹಾಗೂ ೪, ೪.೫, ೫, ೬ ಇಂಚು ಹಾಗೂ ೨೦, ೨೫ ಎಂಎಂ ಅಳತೆಯ ಬಟ್ಟಲು ಮತ್ತು ಸ್ಪೂನ್‌ಗಳು ತಯಾರಾಗುತ್ತವೆ. ಫೆಬ್ರವರಿಯಿಂದ ಮೇ ತಿಂಗಳಲ್ಲಿ ಮಾತ್ರ ಸಿಗುವ ಅಡಿಕೆ ಹಾಳೆಗಳನ್ನು ವರ್ಷಕ್ಕೆ ಆಗುವಷ್ಟು ಸಂಗ್ರಹಿಸಿಡಲಾಗುತ್ತದೆ. ಅದರಲ್ಲಿ ಅಗತ್ಯ ವಸ್ತುಗಳನ್ನು ತಯಾರಿಸಲಾಗುತ್ತಿದೆ.
ಗ್ರಾಮೀಣ ರೈತರ ಸಹಕಾರ :
ಚಿತ್ರದುರ್ಗ ತಾಲೂಕಿನ ಗೊಡಬನಹಾಳ್, ಅನ್ನೇಹಾಳ್, ಗುಂಡೇರಿ, ಸೊಂಡೆಕೊಳ, ಮುಸಂಡಿಹಾಳ್, ಭೀಮಸಮುದ್ರ ಸೇರಿದಂತೆ ಮತ್ತಿತರ ಹಳ್ಳಿಗಳ ರೈತರು ಅಡಿಕೆ ತೋಟಗಳಲ್ಲಿ ಮರದಿಂದ ಬಿದ್ದ ಅಡಿಕೆ ಹಾಳೆಗಳನ್ನು ಉಚಿತವಾಗಿ ನೀಡುತ್ತಾರೆ. ಅವುಗಳನ್ನು ತಂದು ನಾನಾ ಅಳತೆ, ಬಗೆ ಬಗೆಯ ವಿನ್ಯಾಸದ ತಟ್ಟೆ, ಬಟ್ಟಲು, ಸ್ಪೂನ್ ತಯಾರಿಸಲಾಗುತ್ತದೆ. ಇದರಿಂದ ಒಂದಷ್ಟು ದುಡಿಯುವ ಕೈಗೆಳಿಗೆ ಕೆಲಸವೂ ದೊರೆಯುತ್ತಿದೆ.
ಆತ್ಮನಿರ್ಭರ ಯೋಜನೆಯಡಿ ಫೆಬ್ರವರಿ ಅಂತ್ಯಕ್ಕೆ ಬಾಕಿಯಿದ್ದ ಔಟ್ ಸ್ಟ್ಯಾಡಿಂಗ್ ಬಾಕಿ ಹಣದಲ್ಲಿ ಸಾಲ ಪಡೆಯಲಾಗಿದೆ. ಅತೀ ಕಡಿಮೆ ಅಂದರೆ ಶೇಕಡಾ ೭.೫೦ ಬಡ್ಡಿ ದರದಲ್ಲಿ ೩.೫೦ ಲಕ್ಷ ಸಾಲ ಪಡೆದಿದ್ದೇನೆ. ಈ ಹಣದಲ್ಲಿ ಉತ್ಪಾದನೆ ನಡೆಸಲಾಗುತ್ತಿದೆ. ಹಾಗಾಗಿ ಇದನ್ನೇ ನಂಬಿಕೊಂಡಿರುವ ಕೆಲವರಿಗೆ ಉದ್ಯೋಗ ದೊರೆಯುತ್ತಿದೆ. ನಂಬಿಕೊಂಡಿರುವ ಜನಕ್ಕೆ ಕೆಲಸ ಕೊಡಬೇಕು ಎನ್ನುವ ಉದ್ದೇಶದಿಂದ ಉತ್ಪಾದನೆ ಮುಂದುವರಿಸಲಾಗುತ್ತಿದೆ ಎನ್ನುತ್ತಾರೆ ದಿವ್ಯಪ್ರಕಾಶ್.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...

6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ವೈರಸ್ ನಡುವೆ ದ್ವಿಪಕ್ಷೀಯ ಮಾತುತೆ ನಡೆಸಲು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ 6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲು ನ.24-29ರವರೆಗೆ ಜೈಶಂಕರ್ ಅವರು...

ರಾಷ್ಟ್ರ ರಾಜಧಾನಿಯಲ್ಲಿ ತಗ್ಗಿದ ಕೊರೋನಾ ಆರ್ಭಟ: ಸಾವಿನ ಪ್ರಮಾಣದಲ್ಲಿ ಇಳಿಕೆ?

ಹೊಸದಿಗಂತ ಆನ್ ಲೈನ್ ಡೆಸ್ಕ್: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 4,454 ಹೊಸ ಸೋಂಕಿತರು ಪತ್ತೆಯಾಗಿದ್ದು, 121 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೆಹಲಿ ಆರೋಗ್ಯ ಇಲಾಖೆ...

ಬೆಳ್ಳಂಬೆಳಗ್ಗೆ ಕೆಎಎಸ್ ಅಧಿಕಾರಿ ಸುಧಾಗೆ ಶಾಕ್: ಬೆಂಗಳೂರಿನ 9 ಕಡೆಗಳಲ್ಲಿ ಎಸಿಬಿ ದಾಳಿ

ಹೊಸದಿಗಂತ ಆನ್ ಲೈನ್ ಡೆಸ್ಕ್: ರಾಜ್ಯದ ರಾಜಧಾನಿ ಬೆಂಗಳೂರಿನ ಕೆಎಎಸ್ ಅಧಿಕಾರಿ ಸುಧಾ ಮನೆ ಮೇಲೆ ಎಸಿಬಿ ದಾಳಿನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಕೆಎಎಸ್ ಅಧಿಕಾರಿ ಸುಧಾ ಮನೆ ಹಾಗೂ ಸುಧಾ ಸ್ನೇಹಿತರು, ಕುಟುಂಬ ಸದಸ್ಯರ...

Don't Miss

‘ನಿವಾರ್​’ ಚಂಡಮಾರುತ ಭೀತಿ: ಕರ್ನಾಟಕದ ಹಲವೆಡೆ 2 ದಿನ ಭಾರಿ ಮಳೆ ಸಾಧ್ಯತೆ

ಹೊಸ ದಿಗಂತ ಆನ್ ಲೈನ್ ಡೆಸ್ಕ್: ಇಂದು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನ ಕೆಲವು ಭಾಗಗಳಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ನಾಳೆಯಿಂದ 2 ದಿನಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ...

6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್

ಹೊಸದಿಗಂತ ಆನ್ ಲೈನ್ ಡೆಸ್ಕ್: ಕೊರೋನಾ ವೈರಸ್ ನಡುವೆ ದ್ವಿಪಕ್ಷೀಯ ಮಾತುತೆ ನಡೆಸಲು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ 6 ದಿನಗಳ ವಿದೇಶ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಲು ನ.24-29ರವರೆಗೆ ಜೈಶಂಕರ್ ಅವರು...

ರಾಷ್ಟ್ರ ರಾಜಧಾನಿಯಲ್ಲಿ ತಗ್ಗಿದ ಕೊರೋನಾ ಆರ್ಭಟ: ಸಾವಿನ ಪ್ರಮಾಣದಲ್ಲಿ ಇಳಿಕೆ?

ಹೊಸದಿಗಂತ ಆನ್ ಲೈನ್ ಡೆಸ್ಕ್: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 4,454 ಹೊಸ ಸೋಂಕಿತರು ಪತ್ತೆಯಾಗಿದ್ದು, 121 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ದೆಹಲಿ ಆರೋಗ್ಯ ಇಲಾಖೆ...
error: Content is protected !!