ಹೊಸದಿಲ್ಲಿ: ಇಸ್ಲಾಮಿಕ್ ಉಗ್ರ ಸಂಘಟನೆಗಳು ಹಾಗೂ ಮಾದಕವಸ್ತುಗಳ ಮಾರಾಟ ಜಾಲವನ್ನು ಆರ್ಥಿಕವಾಗಿ ಪೋಷಿಸುತ್ತಿರುವ ದಾವೂದ್ ಇಬ್ರಾಹಿಂಗೆ ಪಾಕ್ ಉದ್ಯಮಿ ಅಲ್ಪಾಫ್ ಖನಾನಿ ಕೋಟ್ಯಂತರ ಡಾಲರ್ ಹಣ ಪೂರೈಸಿರುವುದು ಬೆಳಕಿಗೆ ಬಂದಿದೆ.
ದಾವೂದ್ ಹಣಕಾಸು ಅಕ್ರಮಗಳನ್ನು ಜಾಲಾಡಿದ ಅಮೆರಿಕ 2015 ರಲ್ಲಿ ಪನಾಮಾ ಏರ್ಪೋರ್ಟ್ನಲ್ಲಿ ಜಾಗೃತ ದಳಕ್ಕೆ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಖನಾನಿ , ದುಬೈನಲ್ಲಿ ಅತಿ ದೊಡ್ಡ ಹಣಕಾಸು ಲೇವಾದೇವಿ ಖಾಸಗಿ ಕಂಪನಿ ಹೊಂದಿದ್ದು, ಈ ವ್ಯಕ್ತಿ ಪ್ರತಿ ವರ್ಷ 14 ರಿಂದ 16 ದಶಕೋಟಿ ಡಾಲರ್ಗಳಷ್ಟು ಹಣವನ್ನು ದಾವೂದ್ಗೆ ನೀಡಿರುವುದನ್ನು ಅಮೆರಿಕನ್ ಮೂಲದ ಪೈನಾನ್ಷಿಯಲ್ ಕ್ರೈಂ ಎನ್ಪೋರ್ಸ್ಮೆಂಟ್ ನೆಟ್ವರ್ಕ್ ( ಫಿನ್ಸಿನ್) ಪತ್ತೆ ಹಚ್ಚಿದೆ.
ನ್ಯೂಯಾರ್ಕ್ನಲ್ಲಿರುವ ವಿದೇಶಿ ಆಸ್ತಿಗಳ ನಿಯಂತ್ರಣ ಪ್ರಾಧಿಕಾರ ವೀಗ ( ಓಎಫ್ ಸಿಎ) ಖನಾನಿ ನಡೆಸಿರುವ ಹಣಕಾಸಿನ ಅಕ್ರಮಗಳನ್ನು ಕಲೆಹಾಕಿದೆ. ಈ ದಾಖಲೆಗಳ ಪ್ರಕಾರ, ಖನಾನಿ ನಿಯಂತ್ರಣದಲ್ಲಿರುವ ಲೇವಾದೇವಿ ಸಂಸ್ಥೆ ಮೂಲಕ ದಾವೂದ್, ಲಷ್ಕರ್ ಎ ತೊಯ್ಬಾ, ಜೈಷೆ ಎ ಮೊಹಮದ್, ತಾಲಿಬಾನ್ ಹಾಗೂ ಹಿಜ್ಬುಲ್ ಮುಜಾಹಿದ್ದಿನ್ ಸಂಘಟನೆಗಳಿಗೆ ಹಣ ಪೂರೈಸಿದ್ದಾನೆ. ಈ ಉಗ್ರಗಾಮಿ ಸಂಘಟನೆಗಳಿಗೆ ಹಣ ಪೂರೈಸಲು ಜಾಗತಿಕ ಮಟ್ಟದಲ್ಲಿ ಪ್ರಪಂಚದ ವಿವಿಧ ಭಾಗಗಳಲ್ಲಿ ಸ್ಥಾಪಿತವಾಗಿರುವ ಬ್ಯಾಂಕುಗಳನ್ನೂ ಬಳಸಲಾಗಿದೆ.
ಭಾರತೀಯ ಬ್ಯಾಂಕ್ ಹಾಗೂ ಉದ್ಯಮಿಗಳೂ ಭಾಗಿ !
ದುಬಾಯ್ನಲ್ಲಿ ಹಣಕಾಸಿನ ಲೇವಾದೇವಿ ವ್ಯವಹಾರ ಹೊಂದಿರುವ ಖನಾನಿಗೆ ಜುರಾ ನಿಧಿ ಎಕ್ಸ್ಚೇಂಚ್ ಕಂಪನಿ ಹಾಗೂ ಮಜಾಕಾ ಜನರಲ್ ಟ್ರೇಡಿಂಗ್ ಜೊತೆ ಸಂಪರ್ಕವೂ ಇರುವುದನ್ನು ಓಎಫ್ ಸಿಎ ಪತ್ತೆ ಮಾಡಿದೆ . ಭಾರತದ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕವೂ ಉಗ್ರಗಾಮಿ ಸಂಘಟನೆಗಳಿಗೆ ಹಣ ಪೂರೈಕೆಯಾಗಿದೆ
1992, ಡಿ. 6 ರ ನಂತರ ಮುಂಬೈನಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟ ಹಾಗೂ ಕೋಮು ಗಲಭೆ ಪ್ರಕರಣದಲ್ಲಿ ದಾವೂದ್ ನೇರ ಕೈವಾಡವಿದ್ದು ದೇಶದಿಂದ ಪರಾರಿಯಾದ . ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿರುವ ದಾವೂದ್ ಪತ್ತೆಗಾಗಿ ಇಂಟgಪೋಲ್ ಹರಸಾಹಸ ಮುಂದುವರಿಸಿದ್ದರೂ, ಅವನು ಭೂಗತಲೋಕದಲ್ಲಿಯೇ ದಿನಗಳನ್ನು ಎಣೆಸುವಂತಾಗಿದೆ.
ಕಳೆದ 28 ವರ್ಷಗಳಿಂದಲೂ ತಲೆ ಮರೆಸಿಕೊಂಡಿರುವ ದಾವೂದ್ ಮೊದಲು ಆಸರೆ ಪಡೆದಿದ್ದೇ ದುಬಾಯ್ನಲ್ಲಿ. ಎರಡು ವಾರಗಳ ಹಿಂದೆ ಪಾಕಿಸ್ಥಾನವು ವಿಶ್ವ ಸಂಸ್ಥೆಗೆ ಸಲ್ಲಿಸಿದ ಉಗ್ರರ ಪಟ್ಟಿಯಲ್ಲಿ ಭೂಗತ ಪಾತಕಿಯ ಹೆಸರಿತ್ತು. ದಾವೂದ್ ಪಾಕ್ನಲ್ಲಿಯೇ ಇದ್ದಾನೆಂದು ಹೇಳಿದ ಮರುದಿನವೇ ದಾಯಾದಿ ದೇಶ ತನ್ನ ರಾಗ ಬದಲಾಯಿಸಿತು! ಖನಾನಿ ಬಂಧನದ ಅವ ಪೂರ್ಣಗೊಂಡಿದೆ. ಆದರೆ ದಾವೂದ್ ನಿಕಟವರ್ತಿಯೂ ಆಗಿರುವ ಈ ವ್ಯಕ್ತಿ ಈಗ ಪಾಕ್ನಲ್ಲಿರುವನೇ ಅಥವಾ ದುಬಾಯ್ನಲ್ಲಿಯೇ ತಲೆಮರೆಸಿಕೊಂಡಿದ್ದಾನೆಯೇ ಎಂಬುದು ನಿಗೂಢವಾಗಿದೆ .