Tuesday, August 16, 2022

Latest Posts

ದುಷ್ಕರ್ಮಿಗಳಿಂದ ರೇಷ್ಮೆ ಹುಳುವಿಗೆ ಕ್ರಿಮಿನಾಶಕ ಔಷಧಿ ಸಿಂಪಡಣೆ: ಸಾವಿರಾರು ರೂ. ನಷ್ಟ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸ ದಿಗಂತ, ಮಂಡ್ಯ :

ಹುಸ್ಕೂರು ಸಮೀಪದ ಹುಚ್ಚೇಗೌಡ ನದೊಡ್ಡಿ ಗ್ರಾಮದ ರಾಜು ಎಂಬುವವರಿಗೆ ಸೇರಿದ ನೂರ ಐವತ್ತು ರೇಷ್ಮೆ ಚಾಕಿ ಮರಿಗಳಿಗೆ ಯಾರೋ ದುಷ್ಕರ್ಮಿಗಳು ಕ್ರಿಮಿನಾಶಕ ಔಷಧಿ ಸಿಂಪಡಣೆ ಮಾಡಿರುವುದರಿಂದ ಸುಮಾರು ಇಪ್ಪತ್ತೈದು ಸಾವಿರ ರೂ ನಷ್ಟ ಸಂಭವಿಸಿರುವ ಘಟನೆ ಶುಕ್ರವಾರ ತಡರಾತ್ರಿ ಜೋರಾಗಿರುತ್ತದೆ.
ಹುಚ್ಚೇ ಗೌಡನದೊಡ್ಡಿ ಗ್ರಾಮದ ವಾಸಿ .ಲೇಟ್ ಮಾಲೇಗೌಡರ ಪುತ್ರ ರಾಜು ಮಾತನಾಡಿ ನಾವು ತೀರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ .ಬೇರೆಯವರ ಜಮೀನನ್ನು ಗುತ್ತಿಗೆ ಪಡೆದುಕೊಂಡು ಹಿಪ್ಪನೇರಳೆ ಕಡ್ಡಿ ಹಾಕಿದ್ದು .
150ಜಾಕಿ ಮರಿಗಳನ್ನು ತಂದು .ಸಾಕಿ ಹಣ್ಣಿಗೆ ಬರುವ ವೇಳೆ ಯಾರೋ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಮನೆಯ ಚಿಲಕವನ್ನು ಮುರಿದು ಒಳಬಂದು ಕ್ರಿಮಿನಾಶಕ ಔಷಧಗಳನ್ನು ಸಿಂಪಡಿಸಿದ ಕಾರಣ .ಮೇಜಿನಲ್ಲಿದ್ದ ಮರಿಗಳು ಪೂರ್ತಿ ನಾಶವಾಗಿರುತ್ತದೆ ಶನಿವಾರ ಬೆಳಿಗ್ಗೆ ನಾನು ಎಂದಿನಂತೆ ಮರಿಗಳಿಗೆ ಸೊಪ್ಪು ಹಾಕಲು ಬಂದಾಗ ಕ್ರಿಮಿನಾಶಕ ಸಿಂಪಡನೆ ಆಗಿರುವುದು ತಿಳಿದು ಬಂದಿರುತ್ತದೆ ಆದುದರಿಂದ ಎಲ್ಲಾ ಮರಿಗಳು ಮೃತಪಟ್ಟಿದ್ದವು ಇದರಿಂದ ನಮಗೆ ಜೀವನ ನಡೆಸುವುದಕ್ಕೆ ತುಂಬಾ ತೊಂದರೆಯಾಗಿದೆ ಎಂದು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss