ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಡು ರಸ್ತೆಯಲ್ಲಿಯೇ ವ್ಯಕ್ತಿಯೊಬ್ಬನನ್ನು ಥಳಿಸಿ, ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ನಡೆದಿದೆ.
ಅಜಯ್ ಮೃತವ್ಯಕ್ತಿ. ಮಧ್ಯಾನ ಸುಮಾರಿಗೆ ಘಟನೆ ನಡೆದಿದ್ದು, ಇಬ್ಬರು ವ್ಯಕ್ತಿಗಳು ಕೋಲುಗಳಿಂದ ಥಳಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆ ಸಾವಿರಾರು ಜನರಿಂದ ತುಂಬಿರುವ ರಸ್ತೆಯಲ್ಲಿಯೇ ನಡೆದಿದ್ದರೂ ಆತನ ಸಹಾಯಕ್ಕೆ ಯಾರೂ ಬರದೆ, ವಿಡಿಯೋ ಮಾಡಿಕೊಳ್ಳುತ್ತಾ ನಿಂತು ಮಾನವೀಯತೆ ಮರೆತಿದ್ದಾರೆ.
ತುಂಬಾ ಹೊತ್ತಿನ ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆರೋಪಿಗಳು ಗೋವಿಂದ್ ಹಾಗೂ ಅಮಿತ್ ಎನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತರ ಸಹೋದರ ಸಂಜಯ್ ಪೊಲೀಸರಿಗೆ ದೂರು ನೀಡಿದ್ದಾರೆ.