ಹೊಸದಿಲ್ಲಿ: ತಮಗೆ ಗೊತ್ತುಪಡಿಸಿದ ಕ್ಷೇತ್ರಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದ ಮತದಾರರಿಗೆ ದೂರದ ನರಗಳಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಡುವಂತಹ ತಂತ್ರಜ್ಞಾನ ನಿರ್ಮಾಣಕ್ಕಾಗಿ ಐಐಟಿ ಮದ್ರಾಸ್ ನೊಂದಿಗೆ ಚುನಾವಣಾ ಆಯೋಗ ಕೈ ಜೋಡಿಸಿದೆ.
ಸದ್ಯ ಈ ಯೋಜನೆ ಇನ್ನು ಸಂಶೋಧನಾ ಹಾಗೂ ಅಭಿವೃದ್ಧಿ ಹಂತದಲ್ಲಿದ್ದು, ಆಯೋಗ ಮೊದಲ ಮಾದರಿ ಸಿದ್ಧಪಡಿಸುವ ಗುರಿ ಹೊಂದಿದೆ ಎಂದು ಚುನಾವಣಾ ಸಮಿತಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇದೊಂದು ಎರಡು ರೀತಿಯ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆಯಾಗಿದ್ದು, ನಿಯಂತ್ರಿತ ವಾತಾವರಣದಲ್ಲಿ ಅಂತರ್ಜಾಲದ ಸಹಾಯದಿಂದ ಐಪಿ ಯಂತ್ರಗಳನ್ನು ಸಿದ್ದಪಡಿಸಲಾಗುವುದು. ವಿಶೇಷವೆಂದರೆ ಈ ಯಂತ್ರಗಳಿಗೆ ಬೆರಳಚ್ಚು ಯಂತ್ರ ಹಾಗೂ ವೆಬ್ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗುವುದು. ಇದಕ್ಕಾಗಿ ಬ್ಲಾಕ್ ಚೇನ್ ಎಂಬ ತಂತ್ರಜ್ಞಾನ ಬಳಲಾಗುತ್ತಿದೆ ಎಂದು ಹಿರಿಯ ಉಪ ಚುನಾವಣಾ ಆಯುಕ್ತ ಸಂದೀಪ್ ಸಕ್ಸೆನಾ ತಿಳಿಸಿದ್ದಾರೆ.