ದೆವ್ವ ಬಿಡಿಸುವ ನಾಟಕವಾಡಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಮುಕ್ರಿ

0
1301

ಮೈಸೂರು: ಮಸೀದಿಯ ಮುಕ್ರಿ(ಮಾಂತ್ರಿಕ)ಯೊಬ್ಬ ಯುವತಿಯೊಬ್ಬಳಿಗೆ ದೆವ್ವ ಬಿಡಿಸುವ ನಾಟಕವಾಡಿ, ಆಕೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಚಿಲ್ಕುಂದ ಗ್ರಾಮದ ಯುವತಿ ಅತ್ಯಾಚಾರಗೊಳಗಾಗಿದ್ದು, ಹುಣಸೂರಿನ ಲಾಲ್‌ಬನ್ ಬೀದಿಯ ವಾಸಿ, ಹೈರಿಗೆ ಗ್ರಾಮದ ಮಸೀದಿಯ ಧರ್ಮಗುರು ಜಬೀವುಲ್ಲಾ ಎಂಬಾತನೇ ಅತ್ಯಾಚಾರವೆಸಗಿ, ಬಂಧಿತನಾದವ.

ಅವಿವಾಹಿತ ಮಹಿಳೆಯನ್ನು ಆಕೆಯ ಸಂಬಂಧಿಕರು, ಆರೋಪಿ ಜಬೀವುಲ್ಲಾನ ಬಳಿ ಕರೆತಂದು, ಈಕೆಗೆ ಮದುವೆಯಾಗಿಲ್ಲ, ಇದಕ್ಕೆ ಕಾರಣವೇನು ನೋಡಿ ತಿಳಿಸಿ, ಉತ್ತಮ ವರ ಸಿಗುವಂತೆ ಮಾಡಿ ಎಂದು ಕೋರಿದ್ದಾರೆ. ಕಪಟಿ ಜಬೀವುಲ್ಲಾ ಈಕೆಗೆ ಮಾಟ ಮಂತ್ರ ಪ್ರಯೋಗವಾಗಿದೆ, ದೆವ್ವ ಹಿಡಿದಿದೆ ಎಂದು ತಿಳಿಸಿ, ಅದನ್ನು ಬಿಡಿಸುವ ನಾಟಕವಾಡಿ ಪಿರಿಯಾಪಟ್ಟಣ ಬಳಿಯ ದರ್ಗಾದ ಬಳಿಗೆ ಕರೆತಂದು, ಅಲ್ಲಿ ಈಕೆಯ ಜೊತೆಯಲ್ಲಿ ಬಂದಿದ್ದ ಅಕ್ಕನ ಮಗನನ್ನು ದೆವ್ವ ಬಿಡಿಸುವ ವೇಳೆ ನಿನ್ನನ್ನು ಹಿಡಿದುಕೊಳ್ಳಬಹುದೆಂದು ಹೆದರಿಸಿ ದೂರ ಕಳುಹಿಸಿದ ನಂತರ ದರ್ಗಾದ ಆವರಣದಲ್ಲೇ ಸ್ನಾನ ಮಾಡಿಸುವ ನೆಪದಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಈತನ ಪೈಶಾಚಿಕ ಕೃತ್ಯದಿಂದ ನೊಂದ ಯುವತಿ ತನ್ನ ತಂದೆಗೆ ಘಟನೆ ಬಗ್ಗೆ ತಿಳಿಸಿದ್ದಳು. ಯುವತಿಯ ತಂದೆ ಹುಣಸೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜಬೀವುಲ್ಲಾ ವಿರುದ್ಧ ದೂರು ದಾಖಲಿಸಿದ್ದು, ಆರೋಪಿಯನ್ನು ಹೈರಿಗೆ ಗ್ರಾಮದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here