Wednesday, August 10, 2022

Latest Posts

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ನವದೆಹಲಿ: ಏಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿನಿಂದಾಗಿ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ನಿನ್ನೆ ನಿಧನರಾಗಿದ್ದು, ಇಂದು ಅವರ ಅಂತ್ಯಸಂಸ್ಕಾರ ದೆಹಲಿಯ ಲೋಧಿರಸ್ತೆಯ ಚಿತಾಗಾರದಲ್ಲಿ ನಡೆಯಲಿದೆ.
ಕೊರೋನಾ ಸೋಂಕಿನಿಂದ ನಿಧನರಾಗಿರುವುದರಿಂದ ಪಾರ್ಥೀವ ಶರೀರವನ್ನು ಊರಿಗೆ ಕೊಂಡೊಯ್ಯದಂತೆ ವೈದ್ಯರು ಸಲಹೆ ನೀಡಿದ್ದಾರೆ.
ಇಂದು ಸಂಜೆ ನಾಲ್ಕು ಗಂಟೆಗೆ ಅಂತ್ಯಸಂಸ್ಕಾರ ನಡೆಯುವ ನಿರೀಕ್ಷೆ ಇದೆ. ಲಿಂಗಾಯತ ಧರ್ಮದ ವಿಧಿವಿಧಾನ ಅನುಸಾರ ಅಂತ್ಯಕ್ರಿಯೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss