ಹೊಸದಿಲ್ಲಿ: ದೆಹಲಿಯಲ್ಲಿ ಕೊರೋನಾ ಸೋಂಕಿತರು ಹಾಗೂ ಸೋಂಕಿನಿಂದ ಸಾವಿನ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹಾಗೂ ಸೋಂಕಿನಿಮದ ಸಾವನ್ನಪ್ಪುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಜನರು ಸಮಾಧಾನ ಪಡಬಾರದು ಸೋಂಕಿನ ಸಂಖ್ಯೆ ಯಾವಾಗ ಬೇಕಾದರೂ ಏರಿಕೆಯಾಗಬಹುದು ಎಂದು ಜನತೆಗೆ ತಿಳಿಸಿದರು.
ಕೊರೋನಾ ನಿಯಂತ್ರಣಕ್ಕೆ ಬರಲು ಒಬ್ಬರೇ ಹೋರಾಡಲೂ ಸಾದ್ಯವಿಲ್ಲ, ಈ ನಿಯಂತ್ರಣಕ್ಕೆ ಇಡೀ ಜನತೆಯ ಸಹಕಾರ ನೀಡಿದೆ ಎಂದು ಹೇಳಿದರು. ರಾಜ್ಯದಲ್ಲಿ ಹೋಂ ಐಸೊಲೇಷನ್ ಮಾಡಿರುವ ಹಿನ್ನಲೆ ಕೊರೋನಾ ಟೆಸ್ಟಿಂಗ್ ಪ್ರಮಾಣ ಏರಿಕೆಯಾಗಿದೆ. ಕಳೆದ 12 ದಿನಗಳಲ್ಲಿ ಹೋಂ ಐಸೊಲೇಷನ್ ನಲ್ಲಿರುವ ಯಾರೊಬ್ಬರು ಮೃತಪಟ್ಟಿಲ್ಲ ಎಂದರು.