ಹೊಸದಿಲ್ಲಿ: ಈಶಾನ್ಯ ದೆಹಲಿಯಲ್ಲಿ ನಡೆಯುತ್ತಿರುವ ಕೋಮು ಗಲಭೆಯಲ್ಲಿ ದಾಳಿಕೋರರಿಂದ ಮೃತಪಟ್ಟ ವೃದ್ಧನ ಸಾವಿಗೆ ವಾಹನದಲ್ಲಿದ್ದ ‘ಜೈ ಶ್ರೀರಾಮ್ ’ ಎಂದು ಬರೆದಿದ್ದ ಸ್ಟಿಕರ್ ಕಾರಣ ಎಂದು ಅವರ ಪುತ್ರ ಆರೋಪಿಸಿದ್ದಾರೆ.
ಈಶಾನ್ಯ ದೆಹಲಿಯ ಬ್ರಹ್ಮಪುರಿ ನಗರದಲ್ಲಿ ರಾತ್ರಿ 10:30ರ ವೇಳೆಗೆ ಔಷಧಿ ಮಳಿಗೆಗೆ ತೆರಳಿದ ತಂದೆ ಮಗನ ಮೇಲೆ ಕಲ್ಲು ಮತ್ತು ಬಿದಿರು ಕೋಲಿನಿಂದ ಹಲ್ಲೆ ಮಾಡಿ ವಾಹನಕ್ಕೆ ಬೆಂಕಿ ಹಚ್ಚಲಾಯಿತು. ಈ ಸಂದರ್ಭದಲ್ಲಿ 51 ವರ್ಷದ ವಿನೋದ್ ಕುಮಾರ್ ಎಂಬ ವೃದ್ಧ ಮೃತಪಟ್ಟಿದ್ದರು.
ನಮ್ಮ ವಾಹನದ ಮೇಲಿದ್ದ ಜೈ ಶ್ರೀರಾಮ್ ಸ್ಟಿಕರ್ ಗಮನಿಸಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವ ಪ್ರಚೋದನೆಯೂ ನಡೆದಿಲ್ಲ ಎಂದು ವಿನೋದ್ ಕುಮಾರ್ ಪುತ್ರ ನಿತಿನ್ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.