Wednesday, July 6, 2022

Latest Posts

ದೆಹಲಿಯಲ್ಲಿ ರೈತರ ಪ್ರತಿಭಟನೆ: ಇಂದು ನಡೆಯಬೇಕಿದ್ದ ಮಾತುಕತೆ ನಾಳೆಗೆ ಮುಂದೂಡಿಕೆ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ನಡೆಯಬೇಕಿದ್ದ 10 ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಲಾಗಿದೆ.
ಈಗಾಗಲೇ ಕೃಷಿ ಸಂಘಟನೆಗಳು ಹಾಗೂ ಕೇಂದ್ರದ ನಡುವೆ ಒಂಬತ್ತು ಸುತ್ತಿನ ಮಾತುಕತೆ ನಡೆದಿದ್ದು, ಎಲ್ಲವೂ ವಿಫಲವಾಗಿದೆ. ಇಂದು 10ನೇ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದಾಗಿ ನಾಳೆಗೆ ಮಾತುಕತೆ ಮುಂದೂಡಲಾಗಿದೆ. ನಾಳೆ ಮಧ್ಯಾಹ್ನ ಎರಡು ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ. ಈ ಬಾರಿಯಾದರೂ ಬಿಕ್ಕಟ್ಟು ಬಗೆಹರಿಯುತ್ತದೆಯೋ ಕಾದುನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss